ಬಿಜೆಪಿ ಕಾರ್ಯಕರ್ತರ ರಕ್ಷಣೆ ಮಾಡುವುದು ನಮ್ಮ ಕೈಯಲ್ಲಿ ಆಗುತ್ತಿಲ್ಲ - ಈಶ್ವರಪ್ಪ

 ಶಿವಮೊಗ್ಗ (ಜು.28) : ಕೊಲೆಗೆ ಪ್ರತಿಕಾರ ಕೊಲೆ ಎಂದು ಹಿಂದುತ್ವ ನಂಬಲ್ಲ. ಆದರೆ ಇನ್ನು ಮುಂದೆ ಯಾರೂ ಕೊಲೆ ಮಾಡುವ ಧೈರ್ಯವೇ ಮಾಡಬಾರದು, ಆ ರೀತಿಯ ಕ್ರಮವನ್ನು ರಾಜ್ಯ ಸರ್ಕಾರ ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ(Former Minister K.S.Eshwarappa) ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಮಾಡಿದವರನ್ನು ಬಂಧಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಬಲಹೀನವಾಗಿಲ್ಲ ಶಾಂತಿ ಕಾಪಾಡಲು ಹಿಂದುಗಳು ಸಂಯಮದಿಂದ ಇದ್ದಾರೆ. ಎಷ್ಟುದಿನ ಹೀಗೆ ಎಲ್ಲವನ್ನೂ ಸಹಿಸಿಕೊಳ್ಳುವುದು ಎಂದು ಗುಡುಗಿದರು.

                             ವಿನಾಕಾರಣ ಹಿಂದುತ್ವವಾದಿಗಳನ್ನು ಕೆಲವು ಮುಸಲ್ಮಾನ್‌ ಗೂಂಡಾಗಳು ಕಗ್ಗೊಲೆ ಮಾಡುವುದು, ಹಲ್ಲೆ ನಡೆಸುವುದು ನಡೆಯುತ್ತಿದೆ. ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯನ್ನು ಎಲ್ಲ ರಾಜಕೀಯ ಪಕ್ಷಗಳು ಖಂಡನೆ ಮಾಡಬೇಕು. ಯಾರೂ ಇವರಿಗೆ ಬೆಂಬಲ ಕೊಡಬಾರದು. ಹಿಂದುಗಳು ಶಾಂತಿಪ್ರಿಯರು ಅದನ್ನು ಪರೀಕ್ಷೆ ಮಾಡಲು ಹೋಗಬೇಡಿ. ಕೊಲೆಗೆ, ಕೊಲೆ ಎಂಬುದು ನಮ್ಮ ಉದ್ದೇಶ ಅಲ್ಲ. ಆ ರೀತಿಯಾದರೆ ರಾಜ್ಯದಲ್ಲಿ ರಕ್ತಪಾತವೇ ಆಗುತ್ತದೆ. ಅವರ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿದ್ದರೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Post a Comment

Previous Post Next Post