ಶಿವಮೊಗ್ಗ: ಪೋಷಕರು ತನ್ನ ಮಗಳಿಗೆ ಲೈಂಗಿಕ ಕಿರುಕುಳವಾಗಿದೆ ಎಂದು ಶಿಕ್ಷಕರ ಮೇಲೆ ಆರೋಪ; ಆರೋಪವನ್ನು ಖಂಡಿಸಿ ಶಾಲಾ ಮಕ್ಕಳಿಂದ ಉಪವಾಸ ಪ್ರತಿಭಟನೆ; ಅಸ್ವಸ್ಥಗೊಂಡ ಮೂವರು ವಿದ್ಯಾರ್ಥಿಗಳು.

 ಕೆಲ ದಿವಸಗಳ ಹಿಂದೆ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಲ್ವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಪೋಷಕರು ತನ್ನ ಮಗಳಿಗೆ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪ ಮಾಡಿರುವುದನ್ನು ಖಂಡಿಸಿ ಶಾಲಾ ಮಕ್ಕಳಿಂದ ಮೂರು ದಿವಸಗಳಿಂದ ನಡೆಯುತ್ತಿದ್ದ ಉಪವಾಸ ಪ್ರತಿಭಟನೆಯ ಪರಿಣಾಮವಾಗಿ  ಮೂರು ಜನ ಮಕ್ಕಳು ಬಿಸಿಲಿನಲ್ಲಿ ತಲೆ ತಿರುಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

                               ಉಪವಾಸ  ಪ್ರತಿಭಟನೆಯಲಿ ಅಸ್ವಸ್ಥಗೊಂಡ ವಿದ್ಯಾರ್ಥಿನಿ

ಇಷ್ಟಾದರೂ ಅದನ್ನು ಬಗೆಹರಿಸಬೇಕಾದ ಅಧಿಕಾರಿಗಳಾಗಲಿ ರಾಜಕಾರಣಿಗಳಾಗಲಿ ಭೆಟಿ ನೀಡದೇ ಇರುವುದು ವಿಪರ್ಯಾಸವೇ ಸರಿ. ಇನ್ನಾದರು ಇಬ್ಬರು ಶಿಕ್ಷಕರ ಮೇಲೆ ಆಗಿರುವ ಪ್ರಕರಣವನ್ನು ಪಾರದರ್ಶಕತೆಯಿಂದ ತನಿಖೆ ಮಾಡಿ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ನ್ಯಾಯ ಕೊಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.


Post a Comment

Previous Post Next Post