ಗ್ಯಾಂಗ್ ವಾರ್‌ನಲ್ಲಿ ಗಂಭೀರ ಗಾಯಗೊಂಡಿದ್ದ ರೌಡಿ ಶೀಟರ್ ಯಾಸಿನ್ ಖುರೇಷಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಲಷ್ಕರ್ ಮೊಹಲ್ಲಾದಲ್ಲಿ ನಿನ್ನೆ ನಡೆದ ದಾಳಿ ವೇಳೆ ಯಾಸಿನ್ ಖುರೇಷಿ ಗಂಭೀರ ಗಾಯಗೊಂಡಿದ್ದ.
ಯಾಸಿನ್ ಖುರೇಷಿ ಮೇಲೆ ಆದಿಲ್ ಮತ್ತು ಆತನ ಸಹಚರರು ದಾಳಿ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಆತನನ್ನು ಶಿವಮೊಗ್ಗದ ಎನ್.ಹೆಚ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಯಾಸಿನ್ ಖುರೇಷಿ ಇವತ್ತು ಸಂಜೆ ಸಾವನ್ನಪ್ಪಿದ್ದಾನೆ.
ಬುಧವಾರ ಸಂಜೆ ಆದಿಲ್ ಮತ್ತು ಆತನ ಸಹಚರರು ಲಷ್ಕರ್ ಮೊಹಲ್ಲಾದಲ್ಲಿ ಯಾಸಿನ್ ಖುರೇಷಿ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಯಾಸಿನ್‌ನ ಸಹಚರರು ಆದಿಲ್ ಸಹಚರರಾದ ಸೊಹೇಲ್ ಅಲಿಯಾಸ್ ಸೇಬು (32) ಮತ್ತು ಗೌಸ್ (30) ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಚಪ್ಪಡಿ ಕಲ್ಲುಗಳನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Post a Comment