ತಡರಾತ್ರಿಯಲ್ಲಿ ನಡೆದ ಎಟಿಎಂ ರಾಬರಿಯ ವಿಫಲಯತ್ನ

 

ನಗರದ ನೆಹರೂ ರಸ್ತೆಯಲ್ಲಿರುವ ಕೆನೆರಾಬ್ಯಾಂಕ್ ಎಟಿಎಂನಲ್ಲಿ ಕಳ್ಳತನ ನಡೆಸಲು ವಿಫಲಯತ್ನ ನಡೆದಿದೆ. ಸರಿಯಾದ ವೇಳೆಯಲ್ಲಿ ಪೊಲೀಸರ ಆಗಮನದಿಂದ ಕಳ್ಳರ ಫಲಾಯಾನಗೊಂಡಿರುವ ಘಟನೆ ವರದಿಯಾಗಿದೆ.


ಈಗಾಗಲೇ ರಾಜ್ಯಾದ್ಯಂತ ಬ್ಯಾಂಕ್ ರಾಬರಿ ಸದ್ದು ಮಾಡಿದೆ. ಬೀದರ್ ಮತ್ತು ಮಂಗಳೂರಿನಲ್ಲಿ ಬ್ಯಾಂಕ್ ರಾಬರಿಗಳು ಸಾರ್ವಜನಿಕರನ್ನ. ಬೆಚ್ಚಿಬೀಳಿಸಿತ್ತು. ಅದರಂತೆ ಶಿವಮೊಗ್ಗದಲ್ಲಿ ಬ್ಯಾಂಕ್ ಎಟಿಎಂವೊಂದರಲ್ಲಿ ಕಳ್ಳತನದ ಯತ್ನ ತಡರಾತ್ರಿಯಲ್ಲಿ ನಡೆದಿದೆ. 


ನಗರದ ನೆಹರೂ ರಸ್ತೆಯಲ್ಲಿರುವ ಕಲ್ಯಾಣ್ ಜ್ಯೂವೆಲರಿ ಪಕ್ಕದಲ್ಲಿರುವ ಕೆನೆರಾ ಬ್ಯಾಂಕ್ ನ ಎಟಿಎಂನಲ್ಲಿ ಎಟಿಎಂ ಬಾಕ್ಸ್ ಒಡೆಯಲು ಯತ್ನಿಸಿದ್ದು ಅಲೆರಾಮ್ ಒಡೆದುಕೊಂಡಿದೆ. ಸರಿಯಾದ ವೇಳೆಗೆ 112 ಬರುವುದನ್ನ ಗಮನಿಸಿದ ಕಳ್ಳರು ಪರಾರಿಯಾಗಿದ್ದಾರೆ. 


ಹಲ್ಲಿಗಳು ಹೋದರೂ ಈ ಎಟಿಎಂ ಅಲೆರಾಮ್ ಹೊಡೆದುಕೊಳ್ಳವುದರಿಂದ. ಒಂದು ನಿರ್ಲಕ್ಷ ವಹಿಸಿದರೂ ಭಾರಿ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ. ಪ್ರಕರಣ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Post a Comment

Previous Post Next Post