ಬೈಕ್ ನಲ್ಲಿ ಸಾಗುವಾಗಲೇ ಮಹಿಳೆಯೋರ್ವರ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋಗಲಾಗಿದೆ. ವಾಕ್ ಮಾಡಿಕೊಂಡು ಹೋಗುವಾಗ, ಮನೆಯ ಮುಂದೆ ರಂಗೋಲಿಯಿಡುವಾಗ, ಅಡ್ರೆಸ್ ಕೇಳುವ ನೆಪದಲ್ಲಿ, ನಾವು ಪೊಲೀಸರು ನಿಮ್ಮ ಸುರಕ್ಷತೆಯು ನಮ್ಮ ಕಾಳಜಿ ನಿನ್ನೆ ಈ ದಾರಿಯಲ್ಲಿ ರಾಬರಿಯಾಗಿದೆ ನಿಮ್ಮ ಚಿನ್ನ ಬಿಜ್ಜಿಕೊಡಿ ಪೇಪರ್ ನಲ್ಲಿ ಹಾಕುವುದಾಗಿ ವಿವಿಧ ರೀತಿಯಲ್ಲಿ ಮಹಿಳೆಯರನ್ನ ವಂಚಿಸುವುದ್ದನ್ನ ನೋಡಿದ್ದೇವೆ.
ಆದರೆ ಭದ್ರಾವತಿಯಲ್ಲಿ ಮಹಿಳೆಯೋರ್ವರು ಬೈಕ್ ಮೇಲೆ ಹೋಗುವಾಗ ಮತ್ತೊಂದು ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಮಹಿಳೆಯ ಕೊರಳಲ್ಲಿದ್ದ 51 ಗ್ರಾಂ ಮಾಂಗಲ್ಯ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೈಕ್ ನಿಂದ ಮಹಿಳೆ ಬಿದ್ದು ಗಾಯಾಳುವಾಗಿದ್ದಾರೆ.
ವಿಐಎಸ್ ಎಲ್ ಕಾರ್ಖಾನೆಯ ಮುಂದಿನ ರಸ್ತೆಯಲ್ಲಿ 74 ವರ್ಷದ ಮಹಿಳೆ ಸಂಘದ ಸಭೆ ಮುಗಿಸಿಕೊಂಡು ನ್ಯೂಕಾಲೋನಿಯಲ್ಲಿರುವ ಮನೆಗೆ ಹೋಗುವಾಗ ಜೆಟಿಎಸ್ ಶಾಲೆಯ ಮುಂಭಾಗದ ರಸ್ತೆಯಲ್ಲಿ ಹಿಂಬದಿಯಿಂದ ಬಂದ ಅಪರಿಚಿತರು ಕಿತ್ತುಕೊಂಡು ಹೋಗಿದ್ದಾರೆ. ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Post a Comment