ಖಚಿತ ಮಾಹಿತಿಯ‌ ಹಿನ್ನಲೆಯಲ್ಲಿ ಕೆ.ಆರ್ ಪುರಂನಲ್ಲಿರುವ ಬಟ್ಟೆ ಸಂಗ್ರಹದ ಗೋದಾಮಿನಲ್ಲಿ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಸೀರೆಯನ್ನ ವಾಣಿಜ್ಯ ತೆರಿಗೆ ಇಲಾಖೆಗೆ

 ಖಚಿತ ಮಾಹಿತಿಯ‌ ಹಿನ್ನಲೆಯಲ್ಲಿ ಕೆ.ಆರ್ ಪುರಂನಲ್ಲಿರುವ ಬಟ್ಟೆ ಸಂಗ್ರಹದ ಗೋದಾಮಿನಲ್ಲಿ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಸೀರೆಯನ್ನ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.                                      ಶಿವಮೊಗ್ಗದ ಕೆ.ಆರ್ ಪುರಂನಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್ ಎಂಬ ಹೆಸರಿನ ಗೋದಾಮಿನ ಮೇಲೆ ದೊಡ್ಡೊಪೇಟೆ ಪೊಲಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೂಕ್ತ ದಾಖಲಾತಿಗಳನ್ನ ಮಾಲೀಕರು ಹಾಜರು ಪಡಿಸುವಲ್ಲಿ ವಿಫಲರಾಗಿದ್ದಾರೆ.  ಈ ಹಿನ್ನಲೆಯಲ್ಲಿ ಒಂದು ಕೋಟಿ 10 ಲಕ್ಷ ರೂ. ಮೌಲ್ಯದ ಸೀರೆಗಳನ್ನ‌ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.ಚುನಾವಣೆಯ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ನಿನ್ನೆ ಈ ದಾಳಿ ನಡೆದಿದೆ. ಈ ಹಿಂದೆ ವಿಧಾನ ಸಭಾ ಚುನಾವಣೆ ವೇಳೆ ಖಾಸಗಿ ಬಸ್ ನಿಂದ ಬಂದ ಮಾಲುಗಳನ್ನ ಬಿಲ್ ಇಲ್ಲದ ಕಾರಣ ತಪಾಸಣೆ ನಡೆಸಲಾಗಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಈ ರೀತಿಯ ದಾಳಿ ನಡೆದಿತ್ತು.ಈಗ ಈ ದಾಳಿಯು ಚುನಾವಣೆ ಹಿನ್ನಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಎಸ್ಐ ವಸಂತ್‌ ನೇತೃತ್ವದಲ್ಲಿ ದಾಳಿ ನಡೆದಿದೆ.

Post a Comment

Previous Post Next Post