ಶಿವಮೊಗ್ಗ ನಗರದ ಬಂಟರ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು


 ಶಿವಮೊಗ್ಗ ನಗರದ ಬಂಟರ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ವಿಶೇಷವಾಗಿ ಮೂರು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ಸಿನ ಲೇಡಿ ಕಂಡಕ್ಟರ್ , ಅಂಚೆ ವಿತರಕರು ಮತ್ತು ಹೋಟೆಲ್ ನಡೆಸುತ್ತಿರುವ ಮಹಿಳೆಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಮಹಿಳಾ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಮಾತನಾಡಿ ಶಿವಮೊಗ್ಗದಲ್ಲಿ ಬಹುದಿನದ ಕನಸು ಬಂಟರ ಭವನ ಈಗ ನನಸಾಗಿದೆ. ಈ ಬಂಟರ ಭವನದಲ್ಲಿ ಮಹಿಳಾ ಮೊದಲ ಕಾರ್ಯಕ್ರಮವಾಗಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಸಮಾಜಮುಖಿ ಕೆಲಸಗಳನ್ನು ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು.

ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ ಬಂಟರ ಭವನದಲ್ಲಿ ಮೊದಲನೇ  ಮಹಿಳಾ ದಿನಾಚರಣೆ ಕಾರ್ಯಕ್ರಮ ವಿಶೇಷ ಮತ್ತು ವಿಭಿನ್ನವಾಗಿ ನಡೆಯಿತು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳು ಮಾಡಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶೇಷ ಮಹಿಳೆಯರು ನಾವು ಈ ಸಮಾಜದಲ್ಲಿ ಮಾಡುವ ಕೆಲಸ ನಮಗೆ ಮತ್ತು ನಮ್ಮ ಮನೆಯವರಿಗೆ ಹೆಮ್ಮೆಯ ವಿಷಯ ಎಂದರು. ನಮ್ಮನ್ನು ಕರೆಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಶಿವಮೊಗ್ಗ ಮಹಿಳಾ ಬಂಟ್ಸ್ ವಿಭಾಗಕ್ಕೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ವಿಭಾಗದ ಅಧಿಕಾರಿ vinni Mathew ಶಿವಮೊಗ್ಗ ಮಹಿಳಾ ಬಂಟ್ಸ್ ಗೌರವಾಧ್ಯಕ್ಷರಾದ ಡಾ. ಅಮಿತಾ ಹೆಗ್ಡೆ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಉಪಾಧ್ಯಕ್ಷರಾದ ಪ್ರಭಾವತಿ ಶೆಟ್ಟಿ ಕಿಲಕ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾದ ವಾತ್ಸಲ್ಯ ಶೆಟ್ಟಿ ಖಜಾಂಚಿ ಜ್ಯೋತಿ ಶೆಟ್ಟಿ ನಿರ್ದೇಶಕರು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

Post a Comment

Previous Post Next Post