ಚಾನೆಲ್ ನೀರಿನಲ್ಲಿ ತೇಲಿಬಂತು ಅನಾಮಧೇಯ ಶವ

 ಹಾಯ್/ಶಿವಮೊಗ್ಗ
                                                                                     ಸಾಂಧರ್ಭಿಕ ಚಿತ್ರ

ತುಂಗ ಎಡದಂಡೆ ಚಾನೆಲ್ ಬಳಿ ಅನಾಮಧೇಯ ಶವಪತ್ತೆಯಾಗಿದೆ. ಚಾನೆಲ್ ನೀರಿನಲ್ಲಿ ಈ ಶವ ತೇಲಿ ಬಂದಿದ್ದು, ಶವದ ವಾರಸುದಾರರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ಮಾಡಲು ಕೋರಲಾಗಿದೆ. 


ನಿನ್ನೆ ಬೆಳಿಗ್ಗೆ 09:00 ಎ.ಎಂ. ಸಮಯದಲ್ಲಿ ಶಿವಮೊಗ್ಗ ತಾಲ್ಲೂಕು ಮತ್ತು ಜಿಲ್ಲೆ ಹೊಳಲೂರು ಗ್ರಾಮದ  ಹೊಳಲೂರಿನಿಂದ ಹೊಸಕೆರೆಗೆ ಹೋಗುವ ರಸ್ತೆಯ ಹೊಸಕೆರೆ ಸೇತುವೆ ಬಳಿ  ತಿಪ್ಪಣ್ಣರವರ ಜಮೀನಿ ಹತ್ತಿರ  ತುಂಗಾ ಎಡದಂಡೆ ಚಾನಲ್ ನೀರಿನಲ್ಲಿ  ಅನಾಮಧೇಯ ಮೃತ ದೇಹವು ನೀರಿನಲ್ಲಿ ತೇಲಿಕೊಂಡು ಬಂದು ಚಾನಲ್ ಪಕ್ಕದ ಜಾಲಿ ಮರದ ಮುಳ್ಳುಗಳಿಗೆ ಸಿಕ್ಕಿಕೊಂಡಿತ್ತು. 


ಗಂಡಸಿನ ಸುಮಾರು 25-35 ವರ್ಷ ವಯಸ್ಸು ಸಾದರಣ ಮೈಕಟ್ಟು ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.  ದೇಹದ ಮೇಲಿನ ಚರ್ಮ ಕಿತ್ತು ಒಳಭಾಗದ ಬಿಳಿ ಮತ್ತು ಕೆಂಪು ಬಣ್ಣದ ಚರ್ಮ ಕಂಡು ಬಂದಿರುತ್ತದೆ. ಕೈ ಪಾದಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನ ಬಲಮುಂಗೈ ಒಳಬಾಗದಲ್ಲಿ ಇಂಗ್ಲೀಷಿನಲ್ಲಿ Susarta Mahta ಎಂದು ಹಚ್ಚೆ ಗುರುತು ಇರುತ್ತದೆ. 


ಮೃತನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಠಾಣಾಧಿಕಾರಿಗಳು ಶಿವಮೊಗ್ಗ ಗ್ರಾಮಾಂತರ ಪೊಲಿಸ್ ಠಾಣೆ ಮತ್ತು  ಪಿಐ ಶಿವಮೊಗ್ಗ ಗ್ರಾಮಾಂತರ ಪೊಲಿಸ್ ಠಾಣೆ ದೂರವಾಣಿ ಸಂಖ್ಯೆ 08182-261418, ಅಥವಾ ಪೊಲೀಸ್ ಕಂಟ್ರೋಲ್ ರೂಂ 100 ನಂಬರಿಗೆ ಮಾಹಿತಿ ನೀಡಲು ಕೋರಿದೆ.

Post a Comment

Previous Post Next Post