ಹಾಯ್/ಶಿವಮೊಗ್ಗ
ಪ್ರತಿಭಟನ ನಿರತ ಹೋರಾಟಗಾರರು
ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ಚಂದನಕೆರೆ ಗ್ರಾಮದ ಸರ್ವೆ ನಂ: 12ರ ಜಾಗ ನಮ್ಮದು ಎಂದು ಹೋರಾಡುತ್ತಿದ್ದ ಗ್ರಾಮಸ್ಥರಿಗೆ ಶಾಕ್ ಆಗಿದೆ.
ಸರ್ವೆ ನಂಬರ್ 12 ರಲ್ಲಿನ ಜಮೀನನನ್ನ ದಲಿತರಿಗೆ ನೀಡಬೇಕೆಂದು 78 ದಿನಗಳಿಂದ ಡಿಎಸ್ಎಸ್ ಅಂಬೇಡ್ಕರ್ ವಾದ ಸಂಘಟನೆ ಅಡಿ ಪ್ರತಿಭಟನೆ ನಡೆಸಿಕೊಂಡು ಬರಲಾಗುತ್ತಿತ್ತು. ಜು.26 ರಂದು ಕೆಲವರು ಪ್ರತಿಭಟನೆಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ದೂರು ದಾಖಲಾದರೆ, ಪ್ರತಿಭಟನೆಗೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಕೆಲವರು ದೂರು ದಾಖಲಿಸಿದ್ದಾರೆ. ಈಗ ಮತ್ತೊಂದು ದೂರು ದಾಖಲಾಗಿದೆ.
ಎಂಪಿಎಂನ ಎಎಫ್ಒ ಕೃಷ್ಣ ಹನುಮಂತಪ್ಪ ಸಾರಥಿ ಎಂಬುವರು 11 ಜನರ ವಿರುದ್ಧ ಸರ್ಕಾರಿ ಸ್ವತ್ತಿನ ಪ್ರದೇಶಗಳಿಗೆ ಅತಿಕ್ರಮಣ ಪ್ರವೇಶ ಮಾಡಿ ಸರ್ಕಾರಿ ಸ್ವತ್ತನ್ನ ಹಾಳು ಮಾಡಿದ್ದಾರೆ ಎಂದು ಆರೋಪಿಸಿ ದೂರುದಾಖಲಿಸಿದ್ದಾರೆ.
ಮೈಸೂರು ಕಾಗದ ಕಾರ್ಖಾನೆ ಸೇರಿದ 80.00 ಹೆಕ್ಟೇರ್ ನೀಲಗಿರಿ ನೆಡುತೋಪು ಪ್ರದೇಶವಿರುತ್ತದೆ. ಮೈಸೂರು ಕಾಗದ ಕಾರ್ಖಾನೆ ಚಂದನಕೆರೆ ಗ್ರಾಮದ ಸರ್ವೆ ನಂ: 12ರಲ್ಲಿ 1985ರ ಸಾಲಿನಿಂದಲೂ ನೀಲಗಿರಿ ನೆಡುತೋಪನ್ನು ನಿರ್ಮಾಣಮಾಡುತ್ತಾ ಇಲಿಯವರೆಗೂ ಸ್ವಾಧೀನದಲ್ಲಿರುತ್ತದೆ.
ಹಾಗೂ 2060ನೇ ಸಾಲಿನ ವೆರೆಗೂ ಮೈಸೂರು ಕಾಗದ ಕಾರ್ಖಾನೆಗೆ ಗುತ್ತಿಗೆ ನವೀಕರಣ ಗೊಂಡಿರುತ್ತದೆ. ಚಂದನಕೆರೆ ಗ್ರಾಮದ ಸರ್ವೆ ನಂ:12ರ ಎಂ.ಪಿ.ಎಂ ಸ್ವಾಧೀನದಲ್ಲಿರುವ ನೀಲಗಿರಿ ನೆಡುತೋಪಿನ ಪ್ರದೇಶದಲಿ ಚಂದನಕೆರೆ ನಿವಾಸಿಗಳಾದ 1. ನಾಗಪ್ಪ ಬಿನ್. ಚನ್ನಪ್ಪ, 2.ಕುಬೇರ ಬಿನ್ ರಂಗೋಜಿರಾವ್,
3.ರಘು ಬಿನ್ ಚಂದ್ರಪ್ಪನಾಯ್ಕ, 4. ಹರೀಶ ಬಿನ್ ರಂಗಪ್ಪ- 5.ಪರಮೇಶ್ ಬಿನ್ ಬಸಪ್ಪ, 6.ಚಂದ್ರಪ್ಪ ಬಿನ್ ನಾಗೇಂದ್ರಪ್ಪ, 7.ಯೋಗೇಶ್ ಬಿನ್ ರಂಗಪ್ಪ, 8.ನರಸಿಂಹ ಬಿನ್ ರಂಗಪ್ಪ, 9.ಮಲ್ಲಪ್ಪ ಬಿನ್ ಹನುಮಂತಪ್ಪ, 10.ರಾಜಪಕ್ಷಿ ಬಿನ್ ರಜಾಕ ಸಾಹೇಬ್, 11.ಭೈರಪ್ಪ ಬಿನ್ ಚನ್ನಪ್ಪ ಇವರ ವಿರುದ್ಧ ದೂರು ದಾಖಲಾಗಿದೆ.
ಈ 11 ಜನರು ಎಂ.ಪಿ.ಎಂ ನೀಲಗಿರಿ ನೆಡುತೋಪಿನಲ್ಲಿ ಅಕ್ರಮ ಪ್ರವೇಶ ಮಾಡಿ ಜು. 23 ರಿಂದ ಜು.26 ಮಧ್ಯದಲ್ಲಿ ಮರಗಳ ಕಟಾವು ಮಾಡಿ ಹಾಗೂ ನೀಲಗಿರಿ ಮರಗಳ ಚಿಗುರುಗಳನ್ನು ಕಟಾವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ .
ಸರ್ಕಾರಿ ಪ್ರದೇಶದಲ್ಲಿ ಅತಿಕ್ರಮ ಪ್ರವೇಶಮಾಡಿ ಸರ್ಕಾರಿ ಸ್ವತ್ತನ್ನು ಹಾಳುಮಾಡಿದ 11 ಜಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಎಫ್ ಒ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Post a Comment