ಸಿಗಂದೂರು ದೇವಸ್ಥಾನಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಸಹಿ ಹಾಕಿದಂತೆ ಎಂದು ಈ ಹಿಂದೆಯೂ ಎಚ್ಚರಿಸಿದ್ದೆ ಬಿಜೆಪಿಯವರು ಹಾಗೆ ಮಾಡಿದರು ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಸಿಗಂದೂರು ಸೇತುವೆ ವೀಕ್ಷಣೆ ನಡೆಸಿದ ಅವರು, ದೇವಸ್ಥಾನಕ್ಕೆ ಈ ಹಿಂದೆ ಇದೇ ಹಾಲಪ್ಪ ಹಾಗೂ ಸಂಸದ ರಾಘವೇಂದ್ರ ಕೈ ಹಾಕಿದ್ರು ಸಾರ್ವಜನಿಕ ಸ್ಥಳವನ್ನು ಸಾರ್ವಜನಿಕವಾಗಿಯೇ ಬಿಡಬೇಕಿತ್ತು, ಆದರೆ ದೇವಸ್ಥಾನಕ್ಕೆ ಆಡಳಿತ ಮಂಡಳಿಯ ಯನ್ನು ನೇಮಿಸುವ ಮೂಲಕ ದೇವರ ಭಕ್ತಿ ಹಾಗೂ ಶ್ರದ್ಧೆಯನ್ನು ಅಲ್ಲಾಡಿಸಲು ನೋಡಿದ್ದರು. ದೇವಸ್ಥಾನದ ಬುಡಕ್ಕೆ ಕೈ ಹಾಕಿ ಎಲ್ಲೆಲ್ಲಿ ಹೊಡೆತ ಬೀಳುತ್ತೆ ಗೊತ್ತ? ನಾನು ಸಿಗಂದೂರು ದೇವಸ್ಥಾನಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದೆ ಎಂದು ನೆನಪಿಸಿಕೊಂಡರು.
ಬಿಜೆಪಿಯು ಅಧಿಕಾರಕ್ಕಾಗಿ ಭಾರತ್ ಮಾತಾ ಗೋ ಮಾತಾ ಕೇವಲ ಯೋಚನೆಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ ಸಿಗಂದೂರು ದೇವಸ್ಥಾನಕ್ಕೆ ಕೈ ಹಾಕಿದ್ದು ಯಾಕೆ ಅರಣ್ಯ ಸಮಸ್ಯೆ ಇದ್ದರೆ ಅದನ್ನು ಹೋರಾಟ ಮಾಡಿಕೊಂಡು ಜನರೇ ಸಮಸ್ಯೆ ಬಗ್ಗೆ ಹರಿಸಿಕೊಳ್ಳುತ್ತಿದ್ದರು ಇವರು ಪ್ರವೇಶ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಕೋಳೂರು ಮತ್ತು ಕಳಸವಳ್ಳಿ ಎರಡೂ ಹೆಚ್ಚುಕಡಿಮೆ ಒಂದೇ ವೇಳೆಯಲ್ಲಿ ನಿರ್ಮಾಣವಾಗಬೇಕಿತ್ತು ಆದರೆ ಕೋಳೂರು ಸೇತುವೆಯನ್ನು ನಿರ್ಲಕ್ಷಿಸಿ ಕಳಸವಳ್ಳಿ ಸೇತುವೆಯ ಬಗ್ಗೆ ಆಸಕ್ತಿ ತೋರಿದ ಬಿಜೆಪಿ ಸೇತುವೆ ನಿರ್ಮಾಣಕ್ಕೆ ಹೆಚ್ಚು ಒತ್ತುನೀಡಿ ನಿರ್ಮಾಣದ ಉದ್ಘಾಟನೆಗೆ ಸಿದ್ದಗೊಂಡಿದೆ.
ಕೋಳೂರು ಸೇತುವೆ ನಿರ್ಮಾಣಕ್ಕೆ ತಾಂತ್ರಿಕತೆಯ ನೆಪ ಹೇಳಿ ಸ್ಥಗಿತಗೊಳಿಸಲಾಗಿತ್ತು. ಈಗ ಹೇಗೆ ತಾಂತ್ರಿಕದೋಷ ನಿವಾರಣೆ ಆಯಿತು. ಬಿಜೆಪಿಗೆ ಇಚ್ಛಾಶಕ್ತಿಯ ಕೊರತೆ ಇದೆ ಬೇಲೂರು ಅವರಿಗೆ ಇಚ್ಛಾಶಕ್ತಿ ಹೇಗೆ ಬಂತು ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದು ವಾಗ್ದಾಳಿ ಮುಂದುವರಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೂ ನ್ಯಾಯ ಕೊಡಿಸಬೇಕೆಂಬ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕೆ ಇದೆ ನಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ ಕಳೆದ ಒಂದು ವರ್ಷದಿಂದ ಪ್ರಕರಣ ಹೆಚ್ಚು ವೇಗ ಪಡೆದುಕೊಂಡಿದೆ ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.
ಮೂಲ ಸೇತುವೆ ನಿರ್ಮಾತೃವನ್ನು ಬಿಜೆಪಿ ಮರೆತಿದೆ ನಾನು ಕೋಳೂರು ಸೇತುವೆ ಉದ್ಘಾಟನೆ ಭಾಷಣದಲ್ಲಿಯೇ ಪ್ರಸನ್ನ ಅವರ ಬಗ್ಗೆ ಮಾತನಾಡಿದ್ದೆ ಅವರು ಏನೇ ಇರಬಹುದು ಹೋರಾಟದ ಹಿನ್ನೆಲೆಯಲ್ಲಿ ಅವರು ಸೇತುವೆ ನಿರ್ಮಾಣಕ್ಕೆ ಕಾರಣಕರ್ತರು ಅವರನ್ನು ಗೌರವಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದರು
Post a Comment