ಶಿವಮೊಗ್ಗ : ಭದ್ರಾವತಿ ಅಪ್ರಾಪ್ತ ಬಾಲಕನ ಅಪಹರಣ ; ಪೋಲೀಸರ ಯಶಸ್ವಿ ಕಾರ್ಯಾಚರಣೆ ಮೂಲಕ ಆರೋಪಿಗಳ ಬಂಧನ

 ಭದ್ರಾವತಿ ನ್ಯೂಟನ್ ಪೊಲೀಸ್ ಠಾಣ ವ್ಯಾಪ್ತಿಯ ಬೊಮ್ಮನಕಟ್ಟೆ ವಾಸಿಯಾದ ಮಹಮದ್ ಅಜರ್ @ ಮಹಮದ್ ಶ್ಪಿ ರವರ 16  ವರ್ಷದ ಅಪ್ರಾಪ್ತ ವಯಸ್ಸಿನ ಮಗನನ್ನು ದಿನಾಂಕ:22-12-2022 ರಂದು ರಾತ್ರಿ ಸಮಯದಲ್ಲಿ ಇಟಿಯೋಸ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು  ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟು ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0172/2022 ಕಲಂ 364(ಎ) ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ತನಿಖೆ ಸಂಬಂದ ಶ್ರೀ ಜಿತೇಂದ್ರ ದಯಾಮ ಎ ಎಸ್ ಪಿ ಭದ್ರಾವತಿ ಉಪವಿಭಾಗ & ಶ್ರೀ ರಾಘವೇಂದ್ರ ಕಾಂಡಿಕೆ ಸಿಪಿಐ ನಗರ ವೃತ್ತ ಭದ್ರಾವತಿ ರವರ ನೇತೃತ್ವದಲ್ಲಿ ನ್ಯೂಟನ್ ಪೊಲೀಸ್ ಠಾಣೆ ಪಿಎಸ್ಐ ರಂಗನಾಥ ಅಂತರಗಟ್ಟಿ ಮತ್ತು ಸಿಬ್ಬಂದಿಯವರಾದ ಎ ಎಸ್ ಐ ವೆಂಕಟೇಶ್, ಸಿಹೆಚ್ ಸಿ ರಾಘವೇಂದ್ರ, ಶ್ಯಾಮಕುಮಾರ್, ಶ್ರೀಧರ, ರೂಪೇಶ, ಹಾಲಪ್ಪ & ಸಿಪಿಸಿ ಮಾನೇಶ್, ಪೈರೋಜ್, ಸುನೀಲ್ ಕುಮಾರ್, ತೀರ್ಥಲಿಂಗಪ್ಪ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತಂಡವು ದಿನಾಂಕ:23-12-2022 ರಂದು ಅಪಹರಣಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿ ಆರೋಪಿಗಳಾದ 1) ಮುಭಾರಕ್ @ ಡಿಚ್ಚಿ, 24 ವರ್ಷ, ಪೇಟಿಂಗ್ ಕೆಲಸ, ನೆಹರೂನಗರ, ಭದ್ರಾವತಿ, 2) ಜಾಬೀರ್ ಭಾಷಾ @ ರಾಬರ್ಟ್,22 ವರ್ಷ, ಚಾಲಕ ವೃತ್ತಿ, ಹಾನುಭಿ ಏರಿಯಾ ಸಾಗರ, 3) ಮುಸ್ತಫಾ, 26 ವರ್ಷ, ಟೈಲ್ಸ್ ಕೆಲಸ, ಟಿಪ್ಪುನಗರ, ಶಿವಮೊಗ್ಗ. 4) ಅಬ್ದುಲ್ ಸಲಾಂ. 26 ವರ್ಷ, ಅಡಿಕೆ ವ್ಯಾಪಾರಿ, ನೂರುಲ್ ಹುದಾ ಮಸೀದಿ  ಪಕ್ಕ ಕೆಳದಿ ರಸ್ತೆ ಸಾಗರ . 5) ಇರ್ಫಾನ್, 31 ವರ್ಷ, ಚಾಲಕ ವೃತ್ತಿ, ವಾಸ ಅಣಲೆಕೊಪ್ಪ, ಸಾಗರ ರವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.

ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯ ರವರು ಪ್ರಶಂಸಿ ಅಭಿನಂದಿಸಿರುತ್ತಾರೆ.

Post a Comment

Previous Post Next Post