ಶಿವಮೊಗ್ಗ : ತುಂಗಾ ನಗರ ಪೋಲೀಸರ ಶ್ಲಾಘನೀಯ ತನಿಖೆ : 2 ,50,000/- ರೂ ಮೌಲ್ಯದ ಆಭರಣಗಳ ಅಮಾನತು.

     ದಿನಾಂಕ:06/12/2022ರಂದು ತುಂಗಾ  ನಗರ ಪೋಲಿಸ್  ತಾಣ ವ್ಯಾಪ್ತಿಯ ಶ್ರೀ ರಾಮ ನಗರ ಬಡಾವಣೆಯ ನಗರದ ವಾಸದ ಮನೆಯ ಬಾಗಿಲನ್ನು ಮುರಿದು ಮನೆಯ ಬೀರುವಿನಲ್ಲಿದ್ದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 550/2022 ಕಲಂ 380 ಐ  ಪಿ ಸಿ ರಿತ್ಯಾ ಮನೆಗಳ್ಳತನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.


    ಸದರಿ ಪ್ರಕರಣದ ತನಿಖೆ ಕೈಗೊಂಡ ಪಿ ಐ ತುಂಗಾ ನಗರ ಪೊಲೀಸ್ ಸ್ಟೇಷನ್ ಪಿ ಎಸ್ ಐ ಮತ್ತು ಸಿಬ್ಬಂದಿಗಳ ತಂಡವು ದಿನಾಂಕ:14/12/2022ರಂದು ಪ್ರಕರಣದ ಆರೋಪಿ ಗಿರೀಶ್ ಆರ್ @ ಸುಣ್ಣ 38 ವರ್ಷ ಶ್ರೀ ರಾಮ ನಗರ ಗೋಪಾಳ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ  2,50,000 /- ರೂ ಗಳ 60 ಗ್ರಾಂ ಆಭರಣಗಳ ಅಮಾನತು ಪಡಿಸಿಕೊಳ್ಳಲಾಗಿರುತ್ತದೆ. 
   ಪೋಲಿಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಪ್ರಶಂಸಿಸಿರುತ್ತಾರೆ.Post a Comment

Previous Post Next Post