ಶಿವಮೊಗ್ಗ : ಮಕ್ಕಳ ದೌರ್ಜನ್ಯ ಪ್ರಕರಣ ತನಿಖೆ ನಡೆಸಿದ ಶ್ರೀ ಗುರುರಾಜ್ ಕೆ. ಟಿ ಪೊಲೀಸ್ ನಿರೀಕ್ಷಕರು ; DSCI Excellence Award -2022 Indian Cyber cop of the Year ಪ್ರಶಸ್ತಿ ಲಭಿಸಿದೆ .


ಶ್ರೀ ಗುರುರಾಜ್ ಕೆ.ಟಿ. ಪೊಲೀಸ್ ನೀರಿಕ್ಷಕರು, ಸೈಬರ್  ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ (ಹಾಲಿ ಕಡೂರು ಪಿ.ಟಿ.ಎಸ್) ರವರು. POSCO & IT ಕಾಯ್ದೆ ಅಡಿಯಲ್ಲಿ ದಾಖಲಾದ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣ ತನಿಖೆ ನಡೆಸಿ ದೋಷರೋಪಣ ಪತ್ರ ಸಲ್ಲಿಸಿದ್ದು. ಘನ ನ್ಯಾಯಾಲಯದಲ್ಲಿ ಆರೋಪಿಗೆ ಶಿಕ್ಷೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ  DSCI  ನಿಂದ ನೀಡಲಾಗುವ  DSCI  Exellence  Award - 2022ನ  Indian  cyber  Cop of  the  year ಪ್ರಶಸ್ತಿಗೆ ಭಾಜನರಾಗಿದ್ದು, ದಿನಾಂಕ: 20-12-2022 ರಂದು ಹರ್ಯಾಣ ರಾಜ್ಯದ ಗುರ್ಗಾಂವ್ ನಲ್ಲಿ ನಡೆದ NASSCOM-DSC Annual Information security summit  ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಮಾನ್ಯ ಪೊಲೀಸ್ ಅದೀಕ್ಷರು ಶಿವಮೊಗ್ಗ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಗುರುರಾಜ್ ಕೆ.ಟಿ  ರವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Post a Comment

Previous Post Next Post