ಶಿವಮೊಗ್ಗ :ವಿದ್ಯುತ್‌ ಶಾಕ್‌ಗೆ ಲೈನ್‌ ಮ್ಯಾನ್ ಸಾವು


ಶಿವಮೊಗ್ಗ : ರಿಪೇರಿ ಕಾರ್ಯದ ಸಂದರ್ಭ ವಿದ್ಯುತ್‌ ಶಾಕ್‌ಗೆ ಒಳಗಾಗಿ ಲೈನ್‌ ಮ್ಯಾನ್‌ (Line Man) ಸಾವನ್ನಪ್ಪಿದ್ದಾರೆ. ವಿದ್ಯುತ್‌ ಕಂಬದ ಮೇಲೆಯೆ ಸಿಲುಕಿದ್ದ ಅವರನ್ನು ಕೆಳಗಿಳಿಸಿ ತಕ್ಷಣದ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು.

ಮಾಚೇನಹಳ್ಳಿ ಇಂಡಸ್ಟ್ರಿಯಲ್‌ ಏರಿಯಾದ ಮೊದಲ ಅಡ್ಡರಸ್ತೆಯಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಲೈನ್‌ ಮ್ಯಾನ್‌ (Line Man) ನಲ್ಲೂರಿನ ಕಿರಣ್‌ ಅವರಿಗೆ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಲೈನ್‌ ಮ್ಯಾನ್‌ ಸುನಿಲ್‌ ಎಂಬುವವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಿಪೇರಿ ಕಾರ್ಯಕ್ಕಾಗಿ ಕಿರಣ್‌ ವಿದ್ಯುತ್‌ ಕಂಬದ ಮೇಲೆ ಹತ್ತಿದ್ದರು. ಈ ವೇಳೆ ವಿದ್ಯುತ್‌ ಶಾಕ್‌ ತಗುಲಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೋರು ಶಬ್ದವಾಗಿದ್ದರಿಂದ ಸಮೀಪದ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಸ್ಥಳಕ್ಕೆ ದೌಡಾಯಿಸಿದ್ದರು. ಆಂಬುಲೆನ್ಸ್‌ಗೆ ಕರೆಯಿಸಿ ಕಿರಣ್‌ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆ ಹೊತ್ತಿಗಾಗಲೆ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗುತ್ತಿದೆ.

Post a Comment

Previous Post Next Post