ಓಂ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ..

 ಶಿವಮೊಗ್ಗ: ಶಿವಮೊಗ್ಗದ ಪ್ರಮುಖ ಗಣಪತಿ ಪ್ರತಿಷ್ಠಾಪನೆಯಲ್ಲಿ ಒಂದಾಗಿರುವ ಓಂ ಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ದೊರೆತಿದೆ. ಮಧ್ಯಾಹ್ನ 2 ಗಂಟೆಗೆ ಗಣಪತಿ ವಿಸರ್ಜನ ಮೆರವಣಿಗೆಗೆ ಚಾಲನೆನೀಡಲಾಗಿದೆ.

ಓಂ ಗಣಪತಿ ರಾಜಬೀದಿ ಉತ್ಸವವನ್ನ ಅಶೋಕ ರಸ್ತೆ, ರಾಮಣ್ಣ ಶ್ರೇಷ್ಠಿಪಾರ್ಕ್ ಗಾಂಧಿ ಬಜಾರ್, ಶಿವಪ್ಪ ನಾಯಕನ ಪ್ರತಿಮೆ,  ಬಿಹೆಚ್ ರಸ್ತೆ, ಕೋಟೆ ರಸ್ತೆ  ವಾಸವಿ ಶಾಲೆ ರಸ್ತೆ ಕೋರ್ಪಳಯ್ಯನ  ಮಂಟಪದಲ್ಲಿ ಗಣಪತಿ ವಿಸರ್ಜಿಸಲಾಗುತ್ತದೆ.

ಈಗ ಚಂಡೆ ಮದ್ದಳೆ ಮೊದಲಾದ ವಾದ್ಯಗಳೊಂದಿಗೆ ಗಣಪತಿಯ ಮೆರವಣಿಗೆ ಹೊರಟಿದೆ. ಸ್ಥಳದಲ್ಲಿಯೇ ಎರಡು ಜೆಸಿಬಿ ಮೂಲಕ ಹೂವಿನ ಹಾರ ಹಾಕಲಾಗಿದೆ. ಗಣಪತಿ ಮೆರವಣಿಗೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಎಸ್ಪಿಎಂ ರಸ್ತೆಯ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್ ಗೆ ಗಣಪತಿ ಮೆರವಣಿಗೆ ತಲುಪಲಿದೆ.

Post a Comment

Previous Post Next Post