ಸಾಲ ವಾಪಸ್​​ ಕೇಳಿದಕ್ಕೆ ಒಬ್ಬಂಟಿ ಅಜ್ಜಿಯ ಹತ್ಯೆ ಮಾಡಿ, ಚಿನ್ನಾಭರಣವನ್ನೂ ದೋಚಿದ್ದ: ಆ ಪಾತಕಿಯನ್ನು ಪೊಲೀಸ್ ಶ್ವಾನ ಹಿಡಿದಿತ್ತು!

 

ಒಬ್ಬಂಟಿ ಅಜ್ಜಿ ಹತ್ಯೆ ಪ್ರಕರಣದಲ್ಲಿ ದಾವಣಗೆರೆ ಪೊಲೀಸರು ಸ್ವಲ್ಪವೇ ಉದಾಸೀನತೆ ಮಾಡಿದ್ದರೂ ದುಷ್ಟ ರೇವಣಸಿದ್ದಪ್ಪ ಬಚಾವ್ ಆಗಿ ಬಿಡುತ್ತಿದ್ದ. ಅಮಾಯಕ ಹಿರಿಯ ಜೀವವನ್ನ ಬಲಿ ಪಡೆದ ದುಷ್ಟ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇದಕ್ಕೆ ಕಾರಣ ತುಂಗಾ ಎಂಬ ಹೆಣ್ಣು ಶ್ವಾನ. 9 ವರ್ಷಗಲ್ಲಿ 63 ಪ್ರಕರಣಗಳನ್ನ ಇದು ಪತ್ತೆ ಹಚ್ಚಿದೆ. ಆದರೆ ದುಷ್ಟ ಆರೋಪಿಗೆ ಶಿಕ್ಷೆ ಕೊಡಿಸುವವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಂಗಾ ಇತ್ತೀಚಿಗೆ ಸಾವನ್ನಪ್ಪಿದೆ.




ಆ ಮಹಿಳೆ ಹೇಳಿಕೇಳಿ ಜಮೀನ್ದಾರ ಮನೆತನದ ಮಹಿಳೆ. ಮಕ್ಕಳು ಪಟ್ಟಣಕ್ಕೆ ಸೇರಿದರೂ -ತಾನು ಪ್ರೀತಿಸಿದ ಹಳ್ಳಿಯಲ್ಲಿಯೇ ವಾಸವಿದ್ದಳು. ನಂಬಿಕೆ ಇಟ್ಟು ಇದೇ ಗ್ರಾಮದ ವ್ಯಕ್ತಿಗೆ ಜಮೀನು ನಿರ್ವಹಣೆಗೆ ಕೊಟ್ಟಿದ್ದಳು. ಜೊತೆಗೆ ಆತನಿಗೆ ಸಾಲ ಬೇರೆ ಕೊಟ್ಟಿದ್ದಳು. ಬುದ್ದಿವಂತ ಮಹಿಳೆ ಸಾಲ ಕೊಟ್ಟಿದ್ದಕ್ಕೆ ಆತನ ಜಮೀನು ಪತ್ರ ಇಟ್ಟುಕೊಂಡಿದ್ದಳು. ಇಷ್ಟು ಬುದ್ದಿವಂತ ಮಹಿಳೆ ಕೊಲೆಯಾಗಿ ಹೋದಳು. ಕೊಲೆ ಮಾಡಿದ ವ್ಯಕ್ತಿಯನ್ನ ಪತ್ತೆ ಹಚ್ಚಿದ ಪೊಲೀಸ್ ಶ್ವಾನ ಸಹ ಈಗ ಇಲ್ಲ. ಆದ್ರೆ ಕೊಲೆ ಮಾಡಿದ (murder) ದುಷ್ಟನಿಗೆ ಕೋರ್ಟ್​​ ಜೀವಾವಧಿ ಶಿಕ್ಷೆ  (life imprisonment) ವಿಧಿಸಿ ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದೆ. ಇಲ್ಲಿದೆ ಅಜ್ಜಿ ಮರ್ಡರ್ ಸ್ಟೋರಿ (Home alone woman).

ಪೋಟೋದಲ್ಲಿ ಇರುವ ಮಹಿಳೆಯ ಹೆಸರು ಗೌರಮ್ಮ. ದಾವಣಗೆರೆ  (Davanagere) ತಾಲೂಕಿನ ಕಕ್ಕರಗೋಳ್ ಗ್ರಾಮದ ನಿವಾಸಿ. ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದಳು. ಈ ಮಹಿಳೆ 2012 ಜುಲೈ 18 ಸಾವನ್ನಪ್ಪಿದ್ದಳು. ವಿಷಯ ತಿಳಿದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಸಾವಿನ ಬಗ್ಗೆ ಹತ್ತಾರು ಸಂಶಗಳು ವ್ಯಕ್ತವಾದ ಹಿನ್ನೆಲೆ ಶವವನ್ನ ಆಸ್ಪತ್ರೆಗೆ ಸಾಗಿಸಿದ್ದರು.

ಸುದ್ದಿ ತಿಳಿದ ಬಳಿಕ ಗೌರಮ್ಮ ಅವರ ಪುತ್ರ ಕರಿಬಸಪ್ಪ ಅವರು ದೂರು ಸಹ ನೀಡಿದರು. ಪರಿಶೀಲನೆ ಮಾಡಿದಾಗ ಗೊತ್ತಾಗಿದ್ದು. ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಗೊತ್ತಾಯಿತು. ಇದು ಕೊಲೆ ಎಂಬುದು ಸ್ಪಷ್ಟವಾಗಿತ್ತು. ಆಗ ಪೊಲೀಸರಿಗೆ ತಲೆನೋವಾಗಿದ್ದು ಆರೋಪಿ ಯಾರು ಅಂತಾ. ಹುಡುಕಾಡಿ ಹುಡುಕಾಡಿ ಸುಸ್ತಾಗಿ ಪೊಲೀಸ್ ಶ್ವಾನದಳಕ್ಕೆ ಕರೆಯಿಸಲಾಯಿತು.

ವಿಶೇಷವಾಗಿ ಒಂಬತ್ತು ವರ್ಷದ ಹೆಣ್ಣು ಶ್ವಾನ ಕೊಲೆ ಕೇಸ್ ಪತ್ತೆ ಹಚ್ಚುವಲ್ಲಿ ಪ್ರಸಿದ್ಧಿ ಪಡೆದಿತ್ತು. ಮನೆ ಬಂದೆ ಬಂದಿದ್ದೆ ತಡ ನೇರವಾಗಿ ಆರೋಪಿ ಮನೆಗೆ ಕರೆದುಕೊಂಡು ಹೋಗಿತ್ತು. ಆ ಕೊಲೆ ಮಾಡಿದ ದುಷ್ಟ ಬಿ.ಜಿ. ರೇವಣಸಿದ್ದಪ್ಪ ಅಂತಾ. ಇದೇ ಗ್ರಾಮದ 48 ವರ್ಷದ ವ್ಯಕ್ತಿ. ಗೌರಮ್ಮನ ಕಡೆ ಸಾಲ ಪಡೆದಿದ್ದ. ಸಾಲ ಕೇಳಿದಕ್ಕೆ ಅಜ್ಜಿಯನ್ನ ಮುಗಿಸಿ ಹಾಕಿದ್ದ. ಇಷ್ಟಕ್ಕೂ ಅಂದು ನಡೆದಿದ್ದಾರು ಏನು?

ಹೀಗೆ ಕೊಲೆ ಮಾಡಿ ಎರಡು ಬಂಗಾರದ ಬಳೆ ಹಾಗೂ ಎರಡು ಎಳೆಯ ಅವಲಕ್ಕಿ ಸರ ಸೇರಿದಂತೆ ಸುಮಾರು ನಾಲ್ಕು ಲಕ್ಷ ಹತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನ ದೋಚಿಕೊಂಡು ಪರಾರಿ ಆಗಿದ್ದ. ಇತ್ತೀಚಿಗೆ ಸಾವನ್ನಪ್ಪಿದ್ದ ತುಂಗಾ ಎಂಬ ಪೊಲೀಸ್​ ಶ್ವಾನವು ಅಂದು ಮಹತ್ವದ ಸುಳಿವು ನೀಡಿದಾಗ ಪೊಲೀಸರು ತಡಮಾಡದೆ ಜಾಗೃತರಾಗಿ ನೇರವಾಗಿ ಆರೋಪಿ ಮನೆಗೆ ತೆರಳಿ ಪರಿಶೀಲನೆ ಮಾಡಿದಾಗ ಆತ ಆ ದಿನ ಇದ್ದ ಸ್ಥಳ ಹಾಗೂ ಇತರರಿಗೆ ಮಾತಾಡಿದ ಮೊಬೈಲ್ ಕಾಲ್, ಜೊತೆಗೆ ಗೌರಮ್ಮನ ಮನೆಯಿಂದ ಕದ್ದು ತಂದಿಟ್ಟಿದ್ದ ಚಿನ್ನವನ್ನ ಬಚ್ಚಿಟ್ಟದ್ದು ಗೊತ್ತಾಯಿತು.  ಈ ದುಷ್ಟನು ಗೌರಮ್ಮನ ಕಡೆ ಹಣ ಸಾಲ ಪಡೆದಿದ್ದ. ಮೂರು ನಾಲ್ಕು ವರ್ಷಗಳಾದ್ರು ಹಣ ವಾಪಸ್ಸು ಮಾಡಿರಲಿಲ್ಲ. ಗೌರಮ್ಮ ಕೇಳಲು ಶುರು ಮಾಡಿದಾಗ ಆಕೆಯನ್ನು ಮುಗಿಸಿ ಹಾಕಿದ್ದಾನೆ. ಈ ಪ್ರಕರಣಕ್ಕೆ 21 ಜನ ಸಾಕ್ಷಿ ಹೇಳಿದ್ದರು. ಆರೋಪ ಸಾಬೀತಾದ ಹಿನ್ನೆಲೆ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪಾತಕಿಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಿದೆ.

ಪೊಲೀಸರು ಸ್ವಲ್ಪ ಉದಾಸೀನತೆ ಮಾಡಿದ್ದರೂ ದುಷ್ಟ ರೇವಣಸಿದ್ದಪ್ಪ ಬಚಾವ್ ಆಗಿ ಬಿಡುತ್ತಿದ್ದ. ಅಮಾಯಕ ಹಿರಿಯ ಜೀವವನ್ನ ಬಲಿ ಪಡೆದ ದುಷ್ಟ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇದಕ್ಕೆ ಕಾರಣ ತುಂಗಾ ಎಂಬ ಹೆಣ್ಣು ಶ್ವಾನ. ಈ ಒಂಬತ್ತು ವರ್ಷಗಲ್ಲಿ 63 ಪ್ರಕರಣಗಳನ್ನ ಪತ್ತೆ ಹಚ್ಚಿದೆ. ಈ ಗೌರಮ್ಮನ ಕೊಲೆ ಪ್ರಕರಣ ಸೇರಿ 37ಕೊಲೆ ಪ್ರಕರಣ ಪತ್ತೆ ಹಚ್ಚಿರುವುದು ತುಂಗಾ ಪೊಲೀಸ್ ಶ್ವಾನದ ಮಹತ್ತರ ಸಾಧನೆಯೇ ಸರಿ. ಆದರೆ ದುಷ್ಟ ಆರೋಪಿಗೆ ಶಿಕ್ಷೆ ಕೊಡಿಸುವವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಂಗಾ ಇತ್ತೀಚಿಗೆ ಸಾವನ್ನಪ್ಪಿದೆ.


Post a Comment

Previous Post Next Post