ಶಿವಮೊಗ್ಗ :144 ಸೆಕ್ಷನ್‌ ಜಾರಿ


ಶಿವಮೊಗ್ಗ : ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣ ಸಂಬಂಧ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲ್ಲು ತೂರಾಟ ನಡೆಸಿದ ಬಳಿಕ ದುಷ್ಕರ್ಮಿಗಳು ಮನೆಯೊಳಗೆ ಅವಿತಿದ್ದರು ಎಂದು ತಿಳಿದು ಬಂದಿದೆ. ಕಲ್ಲು ತೂರಿದ್ದವರನ್ನು ಪತ್ತೆ ಹಚ್ಚಿದ ಪೊಲೀಸರು ವಶಪಡಿಸಿಕೊಂಡಿದ್ದಾರೆ.


 ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ, 144 ಸೆಕ್ಷನ್‌ ಜಾರಿ


ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭ ಇಂದು ಸಂಜೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಸಂಭವಿಸಿತ್ತು. ಈ ಸಂದರ್ಭ ಪೊಲೀಸರು ಗುಂಪು ಚದುರಿಸಲು ಯತ್ನಿಸಿದರು. ಆಗ ದುಷ್ಕರ್ಮಿಗಳು ಪೊಲೀಸರ ಮೇಲೆಯೆ ಕಲ್ಲು ತೂರಿದ್ದಾರೆ. ಬಂದೋಬಸ್ತ್‌ಗೆ ತೆರಳಿದ್ದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರತ್ತಲು ಕೆಲವು ದುಷ್ಕರ್ಮಿಗಳು ಕಲ್ಲು ತೂರಲು ಪ್ರಯತ್ನಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ 

ಹೆಚ್ಚಿನ  ಮಾಹಿತಿ  ಪೊಲೀಸ್ ತನಿಖೆ  ಇಂಧ  ಬರಬೇಕಾಗಿದೆ 

Post a Comment

Previous Post Next Post