ಚೋರ್ ಬಜಾರ್ ನಲ್ಲಿ ಆಕಸ್ಮಿಕ ಬೆಂಕಿ

 ಶಿವಮೊಗ್ಗದ ಗಾಂಧಿಬಜಾರನಲ್ಲಿರು ಚೋರ್ ಬಜಾರ್ ನಲ್ಲಿ ರಾತ್ರಿ 10 ಗಂಟೆಯಲ್ಲಿ ಕಾಣಿಸಿಕೊಂಡ ಬೆಂಕಿ ಮೂರು ಅಂಗಡಿಗಳನ್ನ ಆಹುತಿ ಪಡೆದಿದೆ

ಸಧ್ಯಕ್ಲೆ ಮೂರು ಬಳೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಚೋರ್ ಬಜಾರ್ ನ ಹೊರಗಡೆ ಎಲ್ಲ ಹೊಗೆ ತಿಂಬಿಕೊಂಡಿದೆ. ರಾತ್ರಿ 10 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು ಎರಡು ಫೈರ್ ಇಂಜಿನ್ ವಾಹನಗಳು ಸ್ಥಳಕ್ಕೆ ಧಾವಿಸಿದೆ.

ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದೆ. ಸ್ಥಳದಲ್ಲಿ ಶಾಸಕ ಚೆನ್ನಬಸಪ್ಪ, ಬಿಜೆಪಿ ಮಾಜಿ ನಗರ ಅಧ್ಯಕ್ಷ ಜಗದೀಶ್ ಸ್ಥಳದಲ್ಲಿದ್ದಾರೆ. ಸತತ ನೀರು ಹೊಡೆಯಲಾಗುತ್ತಿದೆ. ಒಳಗಡೆ ಏನು ಅನಾಹುತವಾಗಿದೆ ಬೆಂಕಿ ಆರಿಸದ ಮೇಲೆ ತಿಳಿದು ಬಂದಿದೆ.

ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅನಾಹುತ ನೋಡಲು ಜನರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ವಿಡಿಯೋದಲ್ಲಿ ಶೂಟ್ ಮಾಡಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಆದರೆ ದಟ್ಟವಾದ ಹೊಗೆ ಎಲ್ಲರನ್ನೂ ಕಂಗೆಡಿಸಿದೆ. ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ವೇಳೆ ಯಾರೂ ಸ್ಥಳದಲ್ಲಿ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. 
Post a Comment

Previous Post Next Post