No title


         ದಿನಾಂಕಃ-29-08-2022 ರಂದು ಭದ್ರಾವತಿ ಹಳೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ *ಹೊಳೆಹೊನ್ನೂರು ರಸ್ತೆಯಿಂದ ಹೊಸಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ ಸಮೀಪದ ಅಂಗಡಿಯ ಮುಂಭಾಗದ ಕಚ್ಚಾರಸ್ತೆಯಲ್ಲಿ* 04 ಜನ ವ್ಯಕ್ತಿಗಳು ಸಾರ್ವಜನಿಕರಿಗೆ ಅಕ್ರಮವಾಗಿ *ಮಾದಕ ವಸ್ತು ಗಾಂಜಾವನ್ನು ಮಾರಾಟ* ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎ.ಎಸ್‌.ಪಿ ಭದ್ರಾವತಿ ಉಪ ವಿಭಾಗ, ಸಿಪಿಐ ಭದ್ರಾವತಿ ನಗರ ವೃತ್ತ ಹಾಗೂ ಹಳೆನಗರ ಪೊಲೀಸ್‌ ಠಾಣೆಯ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿತರಾದ *1)ಮೊಹಮ್ಮದ್‌ ಖಾಲಿದ್‌, 21 ವರ್ಷ, ಅಮೀರ್‌ ಜಾನ್‌ ಕಾಲೋನಿ ಭದ್ರಾವತಿ ಟೌನ್‌, 2) ಮೊಹಮ್ಮದ್‌  ಸಾಹಿಲ್‌, 18 ವರ್ಷ, ಸೀಗೇಬಾಗಿ, ಭದ್ರಾವತಿ  ಟೌನ್‌, 3) ಮೊಹಮ್ಮದ್‌ ಅರ್ಶನ್‌, 23 ವರ್ಷ, ಅನ್ವರ್‌ ಕಾಲೋನಿ ಭದ್ರಾವತಿ ಟೌನ್‌, ಮತ್ತು 4) ಸಯ್ಯದ್ ಅರ್ಭಾಜ್‌, 26   ವರ್ಷ, ಸೀಗೇಬಾಗಿ ಭದ್ರಾವತಿ ಟೌನ್‌* ರವರುಗಳನ್ನು ವಶಕ್ಕೆ ಪಡೆದು ಆರೋಪಿತರಿಂದ *1) ಅಂದಾಜು ಮೌಲ್ಯ 69,000/-  ರೂಗಳ ಒಟ್ಟು 02 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ, 2)800 ರೂ ನಗದು ಹಣ, 3) 03 ಮೊಬೈಲ್‌ ಫೋನ್‌ ಗಳು ಹಾಗೂ ಕೃತ್ಯಕ್ಕೆ ಬಳಸಿದ 02 ದ್ವಿ ಚಕ್ರ ವಾಹನ ಗಳನ್ನು* ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.


Post a Comment

Previous Post Next Post