ಶಿವಮೊಗ್ಗದಲ್ಲಿ ಗಣಪತಿ ಹಬ್ಬವನ್ನ ಕೋಮು ಗಲಭೆಯನ್ನಾಗಿ ಸೃಷ್ಠಿಸುವ ಹುನ್ನಾರ ನಡೆದಿದೆ

 ಶಿವಮೊಗ್ಗದಲ್ಲಿ ಗಣಪತಿ ಹಬ್ಬವನ್ನ ಕೋಮು ಗಲಭೆಯನ್ನಾಗಿ ಸೃಷ್ಠಿಸುವ ಹುನ್ನಾರ ನಡೆದಿದೆ. ಜೊತೆಗೆ ಮೂವರನ್ನ ಕೊಲೆ ಮಾಡುವ ಸಂಚು ರೂಪಿಸಲಾಗಿದೆ.  ಇದರ ಹಿಂದೆ ಮೊಹ್ಮದ್ ಫೈಜಲ್ ಇದ್ದಾನೆ ಎಂದು  ಪತ್ರ ಬರೆದಿದ್ದ ಅಪರಿಚಿತನನ್ನ ಪೊಲೀಸರು ಪತ್ತೆ ಹಚ್ಚಿ ಆತನನ್ನ ತನಿಖೆಗೆ ಒಳಪಡಿಸಿದ್ದಾರೆ.  ಇದೊಂದು ಸುಳ್ಳಿನ ಪ್ರಕರಣ ಎಂಬ ಸತ್ಯವನ್ನ ಪೊಲೀಸರು ಹೊರತೆಗೆದಿದ್ದಾರೆ. ಆದರೆ ಈ ಕೃತ್ಯದ ಹಿಂದೆ ಯಾವ ಸತ್ಯವಿದೆ ಎಂಬುದನ್ನ‌ಊ ಸಹ ಪೊಲೀಸ್ ತನಿಖೆ ಬಯಲಿಗೆಳೆದಿದೆ.  ಈ ಪ್ರಕರಣದಲ್ಲಿ ಸೂಳೆ ಬೈಲಿನ ವ್ಯಕ್ತಿ ಅಯೂಬ್ ಎಂಬಾತ ಈ ಪತ್ರ ಬರೆದ ವ್ಯಕ್ತಿಯಾಗಿಯಾಗಿದ್ದಾನೆ. ಫೈಜಲ್ ಪತ್ನಿಯೊಂದಿಗೆ ಅಫೈರ್ ಹೊಂದಿದ್ದ ಅಯೂಬ್ ಮೊಹ್ಮದ್ ಫೈಸಲ್ ನನ್ನ ಜೈಲಿಗೆ ಕಳುಹಿಸಿ ಆತನ ಪತ್ನಿಯೊಂದಿಗೆ ಸುಖವಾಗಿರಬೇಕೆಂಬ ದುರುದ್ದೇಶದಿಂದ ಈ ಪತ್ರಬರೆದಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ.  ಗಣಪತಿ ಹಬ್ಬಕ್ಕೆ ನಗರದಲ್ಲಿ ಅಶಾಂತಿ ಮೂಡಿಸಿ ಮೂರು ಕೊಲೆಗಳನ್ನ ಮಾಡಲು ಮಾತನಾಡುತ್ತಿರುವುದನ್ನ ಕೇಳಿಸಿಕೊಂಡು ಭಯಭೀತನಾಗಿದ್ದೇನೆ ಎಂದು ಅನಾಮಿಕನ ರೀತಿ ಪತ್ರ ಬರೆದು ಗಾಂಧಿ ಬಜಾರ್ ನ  ಗಂಗ ಪರಮೇಶ್ವರಿ ದೇವಾಲಯದ ಬಳಿ ಖಾಕಿ ಕವರ್ ನಲ್ಲಿ ಇಟ್ಟು ಹೋಗಿದ್ದ ಅಪರಿಚಿತನನ್ನ ಪತ್ತೆ ಹಚ್ಚಿರುವ ಪೊಲೀಸರು ಬೆಚ್ಚಿ ಬೀಳುವ ಸತ್ಯವನ್ನ ಹೊರ ತೆಗೆದಿದ್ದಾರೆ.


Post a Comment

Previous Post Next Post