ಮಗನೇ ನಿನ್ನ ನಾಲಗೆ ಕತ್ತರಿಸ್ತೀವಿ: ಕೆಎಸ್ ಈಶ್ವರಪ್ಪಗೆ ಅನಾಮಧೇಯ ಬೆದರಿಕೆ ಪತ್ರ

 ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಅನಾಮಧೇಯ ಪತ್ರ ಬರೆದಿರುವ ದುಷ್ಕರ್ಮಿಗಳು ಮಗನೇ ನಿನ್ನ ನಾಲಗೆ ಕತ್ತರಿಸುತ್ತೇವೆ ಎಂದು ಬೆದರಿಸಿದ್ದಾರೆ. 

                        ಕೆಎಸ್ ಈಶ್ವರಪ್ಪ

By : Rekha.M
Online Desk

ಶಿವಮೊಗ್ಗ: ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಅನಾಮಧೇಯ ಪತ್ರ ಬರೆದಿರುವ ದುಷ್ಕರ್ಮಿಗಳು ಮಗನೇ ನಿನ್ನ ನಾಲಗೆ ಕತ್ತರಿಸುತ್ತೇವೆ ಎಂದು ಬೆದರಿಸಿದ್ದಾರೆ. 

ಶಿವಮೊಗ್ಗದ ಮಲ್ಲೇಶ್ವರನಗರದಲ್ಲಿರುವ ಈಶ್ವರಪ್ಪ ಮನೆಗೆ ಅನಾಮಧೇಯ ಪತ್ರ ಬಂದಿದೆ. ನಿರಂತರವಾಗಿ ಮುಸ್ಲಿಂರನ್ನು ಟೀಕಿಸುತ್ತಾ, ಮುಸ್ಲಿಂರನ್ನು ಗೂಂಡಾಗಳು ಎಂದು ಕರೆಯುವ ನಿನ್ನನ್ನು ಬಿಡುವುದಿಲ್ಲ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆ ಬೆನ್ನೂರಿನಲ್ಲಿ ಕಾಲೇಜು ಕಟ್ಟಲು ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಗಳನ್ನು ಬಳಸುತ್ತಿದ್ದೀರಾ. ಆದರೂ ನಿಮಗೆ ಮುಸ್ಲಿಂರು ಬೇಡ. ನಿನಗೆ ನಾಚಿಕೆಯಾಗಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ. 

ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ತನಿಖೆ ನಡೆಸಿ ಹೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದರು. 

Post a Comment

Previous Post Next Post