ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಆರೋಪಿ ವಿರುದ್ಧ ಪೋಷಕರಿಂದ ಮತಾಂತರ ಆರೋಪ!

 ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಮತಾಂತರ ಮಾಡಲು ಯತ್ನಿಸಿದ ಪ್ರಕರಣ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

               ಸಂಗ್ರಹ ಚಿತ್ರ

By : Rekha.M
Online Desk

ಮೈಸೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಮತಾಂತರ ಮಾಡಲು ಯತ್ನಿಸಿದ ಪ್ರಕರಣ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

24 ವರ್ಷದ ಯುವಕ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಮದುವೆಯಾಗಬೇಕೆಂದರೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಕೇಳಿದ್ದಾನೆಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಬಾಲಕಿಯ ತಂದೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆರೋಪಿ ಯೋನುಸ್ ಪಾಷಾ ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಮದುವೆಯಾಗಬೇಕಾದಾರೆ ಮತಾಂತರಗೊಳ್ಳುವಂತೆ ತಿಳಿಸಿದ್ದಾನೆಂದು ಹೇಳಿದ್ದಾನೆ.

ನನ್ನ ಮಗಳು ಎಂಟನೇ ತರಗತಿಯಲ್ಲಿ ಓದುತ್ತಿದ್ದು, ಆಕೆಗೆ ದೈಹಿಕ ಸಾಮರ್ಥ್ಯವಿಲ್ಲ. ಪುತ್ರಿಯೊಂದಿಗೆ ಸ್ನೇಹ ಬೆಳಿಸಿದ್ದ ಆರೋಪಿ ಆಕೆಗೆ ಮೊಬೈಲ್ ಕೊಟ್ಟಿದ್ದ. ಶಾಲಾ ವ್ಯಾನ್‌ನಲ್ಲಿ ಪುತ್ರಿ ಜೊತೆಗೆ ಪ್ರಯಾಣಿಸುತ್ತಿದ್ದ ನನ್ನ ಸಂಬಂಧಿಕರೊಬ್ಬರ ಮೂಲಕ ಪಾಷಾ ಅವಳಿಗೆ ಸೆಲ್‌ಫೋನ್ ನೀಡಿದ್ದ.

ಫೋನ್ ಸಿಕ್ಕ ಬಳಿಕ ನನ್ನ ಮಗಳು ಆರೋಪಿ ಜೊತೆಗೆ ಮಾತನಾಡಲು ಆರಂಭಿಸಿದ್ದಾಳೆ. ಈ ವೇಳೆ ಕೆಲ ಅಶ್ಲೀಲ ವಿಡಿಯೋಗಳನ್ನು ಆತನಿಗೆ ಕಳುಹಿಸಿದ್ದಾಳೆ. ನಂತರ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.
 
ಬಳಿಕ ಪುತ್ರಿ ಕೈಗೆ ಕೆಲ ನಿದ್ರೆ ಮಾತ್ರೆಗಳನ್ನು ಕೊಟ್ಟಿರುವ ಆರೋಪಿ, ಮನೆಯ ಸದಸ್ಯರಿಗೆ ಊಟದೊಂದಿಗೆ ಈ ಮಾತ್ರೆಗಳನ್ನು ಹಾಕುವಂತೆ ತಿಳಿಸಿದ್ದಾನೆ. ಆತನ ಸೂಚನೆಯನ್ನು ಪುತ್ರಿ ಪಾಲಿಸಿದ್ದಾಳೆ. ಬಳಿಕ ಮನೆಗೆ ಬಂದಿರುವ ಆರೋಪಿ ಪುತ್ರಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ತನ್ನನ್ನು ಮದುವೆಯಾಗಬೇಕೆಂದರೆ ಮತಾಂತರಗೊಳ್ಳುವಂತ ತಿಳಿಸಿದ್ದಾನೆಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಡ್ಯ ಎಸ್ಪಿ ಯತೀಶ್ ಎನ್ ಅವರು ಹೇಳಿದ್ದಾರೆ.

ಆರೋಪಿ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ ಕಾಯ್ದೆ (ಪೋಕ್ಸೊ), ಐಪಿಸಿ ಸೆಕ್ಷನ್ 376 (3), 354 (ಡಿ), 450, 506, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Post a Comment

Previous Post Next Post