ಶಿವಮೊಗ್ಗ : ಶಿವಮೊಗ್ಗದ ರೈಲ್ವೆ ನಿಲ್ದಾಣದ ರೈಲ್ವೆ ಕ್ಯಾಂಟೀನ್ ಬಂದ್ ; ಊಟ -ಉಪಹಾರಕ್ಕಾಗಿ ಪ್ರಯಾಣಿಕರ ಪರದಾಟ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು.

 

ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಕೆಲವು ದಿನಗಳಿಂದ ರೈಲ್ವೆ ಕ್ಯಾಂಟೀನ್ ಅನ್ನು ಬಂದ್ ಮಾಡಲಾಗಿದೆ. ಈ ರೀತಿ ಮಾಡಿರುವುದರಿಂದ ಅಲ್ಲಿನ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ಕ್ಯಾಂಟೀನ್ ಬಂದ್ ಆಗಿರುವ ಕಾರಣ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರು ಸಹ ಊಟ ಉಪಹಾರಕ್ಕಾಗಿ ಪರದಾಡುವಂತಾಗಿದೆ. ಹತ್ತಿರದಲ್ಲೂ ಸಹ ಯಾವುದೇ  ಹೋಟೆಲ್ ಇಲ್ಲದಿರುವ ಕಾರಣ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ದೂರದ ಪ್ರಯಾಣ ಮಾಡುವ ಕಾರಣ ಪ್ರಯಾಣಿಕರಿಗೆ ಊಟ-ಉಪಹಾರದ ಅಗತ್ಯತೆ ಇದೆ. ಆದರೆ ದಿಡೀರ್ ಆಗಿ ರೈಲ್ವೆ ಕ್ಯಾಂಟೀನ್ ಬಂದ್ ಮಾಡಿರುವುದರಿಂದ ಪ್ರಯಾಣಿಕರೆಲ್ಲರಿಗೂ ಇದರಿಂದ ದೊಡ್ಡ ಮಟ್ಟದ ತೊಂದರೆಯಾಗುತ್ತಿದೆ.  ಇದರಿಂದ ಬೇಸರಗೊಂಡ ಸಾರ್ವಜನಿಕರು ರೈಲ್ವೆ ಅಧಿಕಾರಿಗಳು ಆದಷ್ಟು ಶೀಘ್ರವಾಗಿ ಊಟ-ಉಪಹಾರ ಕಲ್ಪಿಸಿಕೊಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ಹಾಗೂ  ಸಾರ್ವಜನಿಕರ ಹಿತದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ದಯಮಾಡಿ ರೈಲ್ವೆ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಅದಕ್ಕೊಂದು ಪರಿಹಾರ ಕಲ್ಪಿಸಿದರೆ ಇದರಿಂದ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಯನ್ನು  ಬಗೆಹರಿಸಿದಂತಾಗುತ್ತದೆ. ಆದ ಕಾರಣ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಈ ಸಂಕಷ್ಟವನ್ನು ಅರ್ಥಮಾಡಿಕೊಂಡು ಶೀಘ್ರವೇ ಒಂದು ಉತ್ತಮ ನಿರ್ಧಾರ ಕೈಗೊಂಡರೆ ಒಳ್ಳೆಯದು. ಪ್ರಯಾಣಿಕರು ಅನುಭವಿಸುತ್ತಿರುವ ಈ ಸಮಸ್ಯೆಗೆ ರೈಲ್ವೆ ಅಧಿಕಾರಿಗಳು ಒಂದು ಪರ್ಯಾಯ ವ್ಯವಸ್ಥೆ ಮಾಡಬೇಕು ಇಲ್ಲ ಬಂದ್ ಮಾಡಿರುವಂತಹ ರೈಲ್ವೆ  ಕ್ಯಾಂಟೀನ್ ಅನ್ನು ಪುನಃ ಪ್ರಾರಂಭಿಸುವ ನಿರ್ಧಾರ ಕೈಗೊಂಡರೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ಈ ತೊಂದರೆಗೆ ಪರಿಹಾರ ಕಲ್ಪಿಸಿದಂತಾಗುತ್ತದೆ.


Post a Comment

Previous Post Next Post