ಒಳ್ಳೆಯ ಮನುಷ್ಯನಿಗೆ ಕೆಟ್ಟ ಅಂತ್ಯ: ಹೇಡಿಗಳು ನನ್ನ ಬಲಿ ತೆಗೆದುಕೊಳ್ಳಬೇಕಿತ್ತು; ಮಗನ ಕಳೆದುಕೊಂಡ ರೇಣುಕಾಚಾರ್ಯ ರೋಧನ

 ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ದ್ವೇಷಕ್ಕೆ ತಮ್ಮ ಸಹೋದರನ ಪುತ್ರ ಬಲಿಪಶುವಾಗಿದ್ದಾನೆ. ದ್ವೇಷ ಇದ್ದಿದ್ದರೆ ನನ್ನನ್ನು ಸಾಯಿಸಬೇಕಾಗಿತ್ತು, ನಾನು ಅನುಭವಿಸುತ್ತಿರುವ ನೋವಿಗೆ ಮಿತಿಯೇ ಇಲ್ಲ ಎಂದು ರೇಣುಕಾಚಾರ್ಯ ರೋಧಿಸಿದ್ದಾರೆ.

                    ರೇಣುಕಾಚಾರ್ಯ

By : Rekha.M
Online Desk

ಹೊನ್ನಾಳಿ: ನನ್ನ ಮೇಲಿನ ದ್ವೇಷದಿಂದಾಗಿ ಹೇಡಿಗಳು ನನ್ನ ಮಗನನ್ನು ಬಲಿ ತೆಗೆದುಕೊಂಡಿದ್ದಾರೆ. ಅವನ ಬದಲಿಗೆ ನನ್ನನ್ನು ಸಾಯಿಸಬೇಕಾಗಿತ್ತು, ರಾಜಕೀಯ ಸೇಡಿಗೆ ಬಲಿಯಾಗಿದ್ದಾನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ  ಹಾಗೂ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ದ್ವೇಷಕ್ಕೆ ತಮ್ಮ ಸಹೋದರನ ಪುತ್ರ ಬಲಿಪಶುವಾಗಿದ್ದಾನೆ. ದ್ವೇಷ ಇದ್ದಿದ್ದರೆ ನನ್ನನ್ನು ಸಾಯಿಸಬೇಕಾಗಿತ್ತು, ನಾನು ಅನುಭವಿಸುತ್ತಿರುವ ನೋವಿಗೆ ಮಿತಿಯೇ ಇಲ್ಲ ಎಂದು ರೇಣುಕಾಚಾರ್ಯ ರೋಧಿಸಿದ್ದಾರೆ.

ಆತ ನಾಪತ್ತೆಯಾದ ದಿನದಿಂದಲೂ ಆತನ್ ಅಪಹರಣವಾಗಿದೆ ಎಂದು ನಾನು ಹೇಳಿದ್ದೆ.  ಚಂದ್ರಶೇಖರ್ ಗೆ ಕರೆ ಮಾಡಿ ದುಷ್ಕರ್ಮಿಗಳು ಕರೆಸಿಕೊಂಡಿದ್ದಾರೆ.  ಕೊಲೆಗಾರರು ಆತನಿಗೆ ಫೋನ್ ಮಾಡಿದಾಗ ಗೌರಿಗದ್ದೆಗೆ ಹೋಗುತ್ತಿರುವುದಾಗಿ ಹೇಳಿದ್ದ. ಆದರೆ ಜೀವಂತವಾಗಿ ವಾಪಸ್ ಬರಲಿಲ್ಲ, ಒಳ್ಳೆಯ ಮನುಷ್ಯನಿಗೆ ದೊರೆತ ಕೆಟ್ಟ ಅಂತ್ಯ ಇದಾಗಿದೆ, ಈ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಿಎಂ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿರುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ.

ಆರಂಭದಿಂದಲೂ ನಮ್ಮ ಮಗನಿಗೆ ಅಪಾಯವಿರುವ ಬಗ್ಗೆ ನಮಗೆ ಅನುಮಾನವಿತ್ತು, ಇಂದು ಅವನ ಕೊಲೆಯಾಗಿದೆ, ರೇಣುಕಾಚಾರ್ಯ ಅವರ ಮೇಲಿನ ದ್ವೇಷದಿಂದ ನಡೆದ ಕೊಲೆ ಇದಾಗಿದೆ ಎಂದು ಚಂದ್ರಶೇಖರ್ ಚಿಕ್ಕಪ್ಪ ವಿಶ್ವಾರಾಧ್ಯ ಆರೋಪಿಸಿದ್ದಾರೆ.  ಚಂದ್ರಶೇಖರ್ ಹಾಕಿದ್ದ ಸೀಟ್ ಬೆಲ್ಟ್ ಹಾಗೆಯೇ ಇದೆ, ಹೀಗಿರುವಾಗ ದೇಹ ಹಿಂಬದಿಯ ಸೀಟಿಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.


Post a Comment

Previous Post Next Post