ಗಡಿ ವಿವಾದ: ಸಿಎಂ ಬೊಮ್ಮಾಯಿ ಬೆಂಬಲಿಸಿ ಮಹಾರಾಷ್ಟ್ರ ಗಡಿ ಗ್ರಾಮಸ್ಥರ ರ್‍ಯಾಲಿ

 ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಮಾತನಾಡುವ ಜತ್, ಅಕ್ಕಲಕೋಟ್ ಮತ್ತು ಸೊಲ್ಲಾಪುರ ಮತ್ತಿತರ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕಾದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಣ ಗಡಿ ವಿವಾದಲ್ಲಿ ಹೊಸ ಮಾತಿನ ಸಮರ ಶುರುವಾಗಿದೆ. 

                 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By : Rekha.M
Online Desk

ಬೆಳಗಾವಿ: ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಮಾತನಾಡುವ ಜತ್, ಅಕ್ಕಲಕೋಟ್ ಮತ್ತು ಸೊಲ್ಲಾಪುರ ಮತ್ತಿತರ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕಾದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಣ ಗಡಿ ವಿವಾದಲ್ಲಿ ಹೊಸ ಮಾತಿನ ಸಮರ ಶುರುವಾಗಿದೆ. 

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಗ್ರಾಮಸ್ಥರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಘೋಷಣೆ ಕೂಗಿದ್ದಾರೆ. ದಶಕಗಳಿಂದ ನೀರು, ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ. 
ಕರ್ನಾಟಕದ ಗಡಿಭಾಗದಲ್ಲಿರುವ ಜತ್ ತಾಲೂಕಿನ ತಿಕೊಂಡಿ ಗ್ರಾಮದ ನಿವಾಸಿಗಳು ಶನಿವಾರ ರ್‍ಯಾಲಿ ನಡೆಸಿದ್ದು, ತಮಗೆ ನೀರು ನೀಡದ ಮತ್ತು ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಅಭಿವೃದ್ಧಿಪಡಿಸದ ಮಹಾರಾಷ್ಟ್ರದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಗಡಿ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದ್ದು, ಮಕ್ಕಳು ನೆರೆಯ ರಾಜ್ಯದ ಬಿಜಾಪುರದ ಕಾಲೇಜುಗಳಿಗೆ ಹೋಗುತ್ತಾರೆ, ಅದು 25 ಕಿಲೋಮೀಟರ್ ದೂರದಲ್ಲಿದೆ. 40 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮಹೈಸಾಲ್ ಯೋಜನೆಯಿಂದ ನೀರು ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ನಾಲ್ಕು ದಶಕಗಳು ಕಳೆದರೂ ನಮಗೆ ನೀರು ಸಿಕ್ಕಿಲ್ಲ ಎಂದು ರ್‍ಯಾಲಿಯಲ್ಲಿ  ಪಾಲ್ಗೊಂಡಿದ್ದ ನಿವಾಸಿಗಳಲ್ಲಿ ಒಬ್ಬರಾದ ಸೋಮ್ಲಿಂಗ್ ಚೌಧರಿ ಹೇಳಿದರು.

ಜತ್ ನ 40 ಹಳ್ಳಿಗಳಲ್ಲಿ ಸೌಕರ್ಯಗಳ ತೀವ್ರ ಕೊರತೆಯಿದೆ. ಒಂದರಿಂದ ನಾಲ್ಕನೇ ತರಗತಿವರೆಗೆ ಶಾಲೆ ಇದೆ, ಆದರೆ ಒಬ್ಬರೇ ಶಿಕ್ಷಕರಿದ್ದಾರೆ. ಇಲ್ಲಿ  ವೈದ್ಯರಿಲ್ಲ.ಇಲ್ಲಿನ ಶೇ. 10-15 ರಷ್ಟು ಜನರು ಮಾತ್ರ ಮರಾಠಿ ಮಾತನಾಡುವ ಜನರಿದ್ದಾರೆ. ಆದಾಗ್ಯೂ, ಅವರು ಆ ಭಾಷೆಯನ್ನು ಮಾತನಾಡುವುದಿಲ್ಲ.  ಇತ್ತೀಚೆಗಷ್ಟೇ ಮರಾಠಿ ಮಾಧ್ಯಮ ಶಾಲೆ ತೆರೆಯಲಾಗಿದೆ. ಕನ್ನಡ ಮಾಧ್ಯಮ ಶಾಲೆ ಬಹಳ ಹಿಂದಿನಿಂದಲೂ ಇತ್ತು ಎಂದರು.

ಗ್ರಾಮದ ನಿವಾಸಿಗಳು  ಕರ್ನಾಟಕ ರಾಜ್ಯದ ಧ್ವಜಾರೋಹಣ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದ್ದು, ಗ್ರಾಮದ ಮುಖ್ಯ ಕಮಾನು ಬಳಿ ಅವರ ಭಾವಚಿತ್ರವಿರುವ ಬ್ಯಾನರ್ ಹಾಕಿದ್ದಾರೆ. ಅಲ್ಲದೇ ಮಹಾರಾಷ್ಟ್ರದಿಂದ ನಮಗೆ ನೀರು ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸದಿದ್ದರೆ ನಾವು ಅಲ್ಲಿಗೆ ಕರ್ನಾಟಕಕ್ಕೆ ಹೋಗುತ್ತೇವೆ ಎಂದು ಒತ್ತಾಯಿಸಿದ್ದಾರೆ.

ಗ್ರಾಮವನ್ನು ಕರ್ನಾಟಕಕ್ಕೆ ವಿಲೀನಗೊಳಿಸಲು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಮಂಡಿಸಲು ಜನರು ಸಿದ್ಧರಾಗಿದ್ದಾರೆ ಎಂದು ಮತ್ತೋರ್ವ ನಿವಾಸಿ ಹೇಳಿದರು. ಗ್ರಾಮದ ಸರಪಂಚ್ ಆಗಿರುವ ಮಹಾದೇವ ಹಾದಿಮನಿ ಮಾತನಾಡಿ, ಮಹೈಸಾಲ್ ಯೋಜನೆಯಿಂದ ಈ ಗ್ರಾಮಗಳಿಗೆ ನೀರು ನೀಡದ ಕಾರಣ 42 ಗ್ರಾಮಗಳ ಜನರು ಆಕ್ರೋಶಗೊಂಡಿದ್ದಾರೆ. “ಬಿಜಾಪುರ (ಕರ್ನಾಟಕದಲ್ಲಿ) ಬಳಿ ನೀರಿನ ಯೋಜನೆ ಇದೆ, ಅಲ್ಲಿಂದ ಕೆಲವು ಗಡಿಭಾಗದ ಹಳ್ಳಿಗಳಿಗೆ  ನೀರು ಹರಿಸಲು ಮನವಿ ಮಾಡಿದಾಗ ನೀರು ಸಿಗುತ್ತದೆ, ನೀರು ಕೊಡಲು ಸಾಧ್ಯವಾಗದಿದ್ದರೆ ಇಲ್ಲಿನ ಸ್ಥಳೀಯರು ಕರ್ನಾಟಕಕ್ಕೆ ಹೋಗುತ್ತಾರೆ ಎಂದು ಹಾದಿಮನಿ ಹೇಳಿದರು. ಬೊಮ್ಮಾಯಿ ಅವರ ಬ್ಯಾನರ್, ಚಿತ್ರವನ್ನು ಪೊಲೀಸರು ತೆಗೆದುಹಾಕಿದ್ದಾರೆ ಎಂದು ಅವರು ಹೇಳಿದರು.

ಸಾಂಗ್ಲಿ ಜಿಲ್ಲಾಧಿಕಾರಿ ರಾಜಾ ದಯಾನಿಧಿ ಅವರನ್ನು ಸಂಪರ್ಕಿಸಿದಾಗ, ಗ್ರಾಮದ ಕಮಾನುಗಳಲ್ಲಿ ಹಾಕಲಾಗಿದ್ದ ಬ್ಯಾನರ್ ಅನ್ನು ಜಿಲ್ಲಾಡಳಿತ ತೆಗೆದುಹಾಕಿರುವುದಾಗಿ ತಿಳಿಸಿದರು. 


Post a Comment

Previous Post Next Post