ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಜಾಥಾ : ಶಿವಮೊಗ್ಗ

 

ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಸಾಚರಣೆ ಅಂಗವಾಗಿ ದಿನಾಂಕ 29-11-2022 ರಂದು ಬೆಳಿಗ್ಗೆ  9 ಗಂಟೆಗೆ ಕಛೇರಿಯ ಆವರಣದಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುತ್ತು. ಸದರಿ ಜಾಥಾವನ್ನು ಟಿ. ಶಿವಣ್ಣ, ನಿವೃತ್ತ ಜಿಲ್ಲಾ ನ್ಯಾಯಾದೀಶರು ಹಾಗೂ ಅದ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಜ್ಯಗಳ ಪರಿಹಾರ ಆಯೋಗ ಶಿವಮೊಗ್ಗ ಇವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಸದರಿ ಜಾಥಾದಲ್ಲಿ ಆರಕ್ಷಕ ಇಲಾಖೆಯವರು, ಆಟೋಚಾಲಕರು, ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು, ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. 

ಜಾಥಾದ ಕೊನೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಬಗ್ಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಗಾಯಿತ್ರಿ ಕೇಂದ್ರ ಸ್ಥಾನೀಯ ಸಹಾಯಕರು, ಮಲ್ಲೇಶಪ್ಪ ಮೋಟಾರು ವಾಹನ ನಿರೀಕ್ಷಕರು, ಕಚೇರಿಯ ಅಧೀಕ್ಷಕರಾದ ಶ್ರೀ ರಾಮಚಂದ್ರಪ್ಪ ಎಚ್.ಸಿ,  ಪ್ರಹಲ್ಲಾದ .ಎಲ್ ಹಾಗೂ ಪತ್ರ ಕರ್ತರು, ಶಾಲಾ-ಕಾಲೇಜುಗಳ ಶಿಕ್ಷಕರು ಭಾಗವಹಿಸಿದ್ದರು.

Post a Comment

Previous Post Next Post