ಮಂಗಳೂರು ಸ್ಫೋಟ ಪ್ರಕರಣ: ಮೂಲಭೂತವಾದಿ ಯುವಕರಿಂದ ರಾಜ್ಯಕ್ಕೆ ಬೆದರಿಕೆ!

 ಡಿಸೆಂಬರ್ 2020 ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ಬಳಿಕ ಪತ್ತೆಯಾದ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಬಂಧನಕ್ಕೊಳಗಾದ ಇತರೆ ಯುವಕರಲ್ಲಿ ಶಾರೀಕ್ ಕೂಡ ಒಬ್ಬನಾಗಿದ್ದಾನೆ.

                            ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಆರೋಪಿ ಶಾರೀಕ್ ಮನೆಯ ಬಳಿ ಇರುವ ಪೊಲೀಸರು.

By : Rekha.M
Online Desk

ಬೆಂಗಳೂರು: ಡಿಸೆಂಬರ್ 2020 ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ಬಳಿಕ ಪತ್ತೆಯಾದ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಬಂಧನಕ್ಕೊಳಗಾದ ಇತರೆ ಯುವಕರಲ್ಲಿ ಶಾರೀಕ್ ಕೂಡ ಒಬ್ಬನಾಗಿದ್ದಾನೆ.

ನವೆಂಬರ್ 19 ರಂದು ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಶಾರೀಕ್ ಪ್ರಮುಖ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಏಕಾಂಗಿಯಾಗಿ ಅಥವಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಾರೀಕ್ ಪ್ರಕರಣ ಸೇರಿ ನವೆಂಬರ್ 2020 ರಿಂದ ಒಟ್ಟು 3 ಭಯೋತ್ಪಾದಕ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಮೂಲಭೂತವಾದಿ ಯುವಕರು ಇತ್ತೀಚಿನ ದಿನಗಳಲ್ಲಿ ರಾಜ್ಯಕ್ಕೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿ ಮಜ್ ಮುನೀರ್ ಅಹ್ಮದ್ (21) ಈ ಹಿಂದೆ ಬಂಧನಕ್ಕೊಳಗಾಗಿದ್ದ. ಮಂಗಳೂರಿನಲ್ಲಿ ಉಗ್ರ ಸಂಘಟನೆಯ ಪರವಾಗಿ ಗೋಡೆ ಬರಹ ಬರೆದಿದ್ದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿತ್ತು.

ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಇಸಿಸ್) ಜೊತೆ ಸಂಬಂಧ ಹೊಂದಿದ್ದ ಅಹ್ಮದ್ ಮತ್ತು ಇನ್ನೊಬ್ಬ ಇಂಜಿನಿಯರಿಂಗ್ ಪದವೀಧರ ಸೈಯದ್ ಯಾಸಿನ್ (21) ಇಬ್ಬರನ್ನೂ ಬಂಧಿಸಲಾಗಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗ ಸ್ಫೋಟ ಮತ್ತು ರಾಷ್ಟ್ರಧ್ವಜ ಸುಟ್ಟ ಪ್ರಕರಣದಲ್ಲಿ ಶಾರೀಕ್ ವಾಟೆಂಡ್ ವ್ಯಕ್ತಿಯಾಗಿದ್ದ.

ಪ್ರಕರಣ ಸಂಬಂಧ ಜಾಮೀನು ಪಡೆದಿದ್ದ ಅಹ್ಮದ್ ಹಾಗೂ ಯಾಸಿನ್ ನಂತರ ನಾಪತ್ತೆಯಾಗಿದ್ದು, ಈ ಇಬ್ಬರೂ ಶಾರೀಕ್'ಗೆ ಮಾರ್ಗದರ್ಶನ ನೀಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಮಂಗಳೂರು ಸ್ಫೋಟ ಪ್ರಕರಣದಲ್ಲಿ ದೊಡ್ಡ ದುರಂತವೇ ಸಂಭವಿಸಬೇಕಿತ್ತು. ಆದರೆ, ಅದೃಷ್ಟವಶಾತ್ ಸಮಯಕ್ಕಿಂತ ಮುಂಚೆಯೇ ಕುಕ್ಕರ್ ಸ್ಫೋಟಗೊಂಡಿದ್ದು, ದುರಂತ ತಪ್ಪಿದಂತಾಗಿದೆ. ಶಾರೀಕ್ ಹೊತ್ತೊಯ್ಯುತ್ತಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಹೊಂದಿದ್ದ ಪ್ರೆಶರ್ ಕುಕ್ಕರ್ ನಿಗದಿತ ಸಮಯಕ್ಕಿಂತ ಮುಂಚೆಯೇ ಸ್ಫೋಟಗೊಂಡಿತ್ತು. ತನಿಖೆ ವೇಳೆ ಆಟೋದಲ್ಲಿ ಬ್ಯಾಟರಿಗಳು, ತಂತಿಗಳು, ನೆಟ್ ಹಾಗೂ ಬೋಲ್ಟ್, ರಾಸಾಯನಿಕ ವಸ್ತುಗಳು ಪತ್ತೆಯಾಗಿದ್ದು, ಈ ಸುಳಿವು ದೊಡ್ಡ ದುರಂತ ತಪ್ಪಿರುವುದನ್ನು ಸಾಬೀತುಪಡಿಸಿದೆ.

ಯುವಕರ ಬ್ರೈನ್ ವಾಷ್ ಮಾಡುತ್ತಿರುವ ಉಗ್ರ ಸಂಘಟನೆಗಳು: ಮುಂದುವರೆದ ತನಿಖೆ
ಮಂಗಳೂರು ಸ್ಫೋಟ ಪ್ರಕರಣ ಸಾಕಷ್ಟು ರಾಜ್ಯದಲ್ಲಿ ಸಾಕಷ್ಟು ಭೀತಿಯನ್ನು ಸೃಷ್ಟಿಸಿದ್ದು, ರಾಷ್ಟ್ರೀಯ ಭದ್ರತೆ ಕುರಿತು ಪ್ರಶ್ನೆಗಳು ಮೂಡತೊಡಗಿದೆ.

ಕೆಲ ಮೂಲಭೂತವಾದಿಗಳು ತಮ್ಮ ದುಷ್ಕೃತ್ಯಗಳಿಗೆ ಯುವಕರನ್ನು ಬಳಸಿಕೊಳ್ಳುತ್ತಿದ್ದು, ಅವರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ.

ಡಿಸೆಂಬರ್ 2020 ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ನಂತರ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಬಂಧನಕ್ಕೊಳಗಾದ ಯುವಕರಲ್ಲಿ ಶಾರಿಕ್ ಕೂಡ ಒಬ್ಬನಾಗಿದ್ದ. ಆಗಸ್ಟ್‌ನಲ್ಲಿ, ಸಿಸಿಬಿ ಮತ್ತು ಐಬಿ ಅಖ್ತರ್ ಹುಸೇನ್ ಎಂಬಾತನನ್ನು ಬಂಧಿಸಿತ್ತು. ಈತನ ಸಹಚರರಾದ ಆದಿಲ್ ಅಲಿಯಾಸ್ ಜುಬಾನನ್ನೂ ತಮಿಳುನಾಡಿನ ಸೇಲಂ ನಲ್ಲಿ ಬಂಧಿಸಲಾಗಿತ್ತು. ಇಬ್ಬರೂ ನಿಷೇಧಿತ ಜಾಗತಿಕ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು. ಈ ಉಗ್ರ ಸಂಘಟನೆ ಇಬ್ಬರಿಗೆ ಯುವಕರ ನೇಮಕಾತಿ ಮಾಡಿಕೊಳ್ಳುವ ಜವಾಬ್ದಾರಿ ನೀಡಿತ್ತು. ಇದರಂತೆ ಇಬ್ಬರು ಯುವಕರ ಬ್ರೇನ್ ವಾಶ್ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಆಗಸ್ಟ್‌ನಲ್ಲಿ ಶಿವಮೊಗ್ಗ ಪೊಲೀಸರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವೀರ್ ಸಾವರ್ಕರ್ ಪೋಸ್ಟರ್ ಪ್ರದರ್ಶಿಸಿ ಘರ್ಷಣೆ ಸಂಭವಿಸಿದ ಸಂದರ್ಭದಲ್ಲಿ ಪ್ರೇಮ್ ಸಿಂಗ್ (20) ಗೆ ಇರಿದ ಆರೋಪದ ಮೇಲೆ ಎಂಡಿ ಜಬೀವುಲ್ಲಾ (30), ತನ್ವೀರ್ ಅಹಮದ್ (22), ನದೀಮ್ ಫೈಸಲ್ (25) ಮತ್ತು ಅಬ್ದುಲ್ ರೆಹಮಾನ್ (25) ಅವರನ್ನು ಬಂಧಿಸಿದ್ದರು.

ತನಿಖೆ ವೇಳೆ ರಾಜ್ಯದಲ್ಲಿ ಹಿಂಸಾಚಾರ ಸೃಷ್ಟಿಲು ಬಂಧಿತ ಜಬೀವುಲ್ಲಾಗೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಸೂಚನೆ ನೀಡಿತ್ತು ಎಂಬುದು ತಿಳಿದುಬಂದಿತ್ತು.

ಆಗಸ್ಟ್ 6, 2021 ರಂದು, ಇಸಿಸ್ ನೇಮಕಾತಿ ಪ್ರಕರಣದಲ್ಲಿ ಭಟ್ಕಳದ ಜುಫ್ರಿ ಜವಾಹರ್ ದಾಮುದಿ (30) ಯನ್ನು ಎನ್ಐಎ ಬಂಧಿಸಿತ್ತು.

2016ರಲ್ಲಿ ಇಸಿಸ್ ನಡೆಸುತ್ತಿದ್ದ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಂದು ಎನ್ಐಎ ಅದ್ನಾನ್ ಹಸನ್ ದಾಮುದಿ ಎಂಬಾತನನ್ನು ಬಂಧಿಸಿತ್ತು. ಈದ ಭಾರತದಲ್ಲಿ ಇಸಿಸ್'ನ ಮುಖ್ಯ ನೇಮಕಾತಿದಾರನಾಗಿದ್ದ ಭಟ್ಕಳದ ಸುಲ್ತಾನ್ ಅರ್ಮಾರ್ ಜೊತೆಗೆ ನಂಟು ಹೊಂದಿದ್ದ. ಜುಫ್ರಿ ಜವಾಹರ್ ದಾಮುದಿ ಈತನ ಸಹೋದರನಾಗಿದ್ದಾನೆ.

ಈ ಸುಲ್ತಾನ್ ಅರ್ಮಾರ್ ಹಾಗೂ ಆತನ ಸಹೋದರ ಸಿರಿಯಾದಲ್ಲಿ ಹತ್ಯೆಯಾದ ಇಸಿಸ್ ಸಂಸ್ಥಾಪಕ ಅಬು ಬಕಲ್ ಅಲ್-ಬಾಗ್ದಾದಿಗೆ ಆಪ್ತರಾಗಿದ್ದಾರೆ.

 ಕರ್ನಾಟಕದ ಇತರ ಮೂಲಭೂತವಾದಿ ಯುವಕರಲ್ಲಿ ಅರಾಫತ್ ಅಲಿ, ಮುಸಬ್ಬೀರ್ ಹುಸೇನ್ ಮತ್ತು ಅಬ್ದುಲ್ ಮಥೀನ್ ಅಹ್ಮದ್ ತಾಹಾ ಕೂಡ ಸೇರಿದ್ದಾರೆ.

ಹಿಂದೂ ಮುಖಂಡನೊಬ್ಬನ ಹತ್ಯೆಯ ಹಿಂದೆ ಬೆಂಗಳೂರಿನಲ್ಲಿರುವ ಅಲ್-ಹಿಂದ್ ಐಸಿಸ್ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಅಬ್ದುಲ್ ಮಥೀನ್ ಅಹ್ಮದ್ ತಾಹಾ ಕುರಿತು ಮಾಹಿತಿ ನೀಡಿದವರಿಗೆ ರೂ.3 ಲಕ್ಷ ಬಹುಮಾನ ನೀಡುವುದಾಗಿ ಈಗಾಗಲೇ ಎನ್ಐಎ ಘೋಷಣೆ ಮಾಡಿದೆ.Post a Comment

Previous Post Next Post