ತೀರ್ಥಹಳ್ಳಿ :ವಿಹಂಗಮ ರೆಸಾರ್ಟ್ ಮೇಲೆ ಪೊಲೀಸ್ ದಾಳಿ. ಬೆಚ್ಚಿ ಬಿದ್ದ ತೀರ್ಥಹಳ್ಳಿ ಜನತೆ. ಅಕ್ರಮಗಳ ತಾಣವಾಗುತ್ತಿದೆಯೆ?

ತೀರ್ಥಹಳ್ಳಿ ಎಂದರೆ ಅದೊಂದು ಮಲೆನಾಡಿನ ಹಚ್ಚಹಸಿರಿನ ಒಂದು ಸುಂದರವಾದ ಊರಾಗಿದ್ದು ಇಲ್ಲಿನ ಜನರ ಮುಗ್ಧತೆಯು ಇಡಿ ರಾಜ್ಯವನ್ನೆ ಗಮನ ಸೆಳೆದಿದೆ. ಆದರೆ ಇತ್ತೀಚೆಗೆ  ರಾಜಕೀಯ ಚಟುವಟಿಕೆಗಳ ಬೆಳವಣಿಗೆಯಿಂದ ಅತಿ ಹೆಚ್ಚು ತೀರ್ಥಹಳ್ಳಿಯಲ್ಲಿ ಅಕ್ರಮ ಚಟುವಟಿಗಳು ನಡೆಯುತ್ತಿತ್ತು ತೀರ್ಥಳ್ಳಿ ಜನತೆಯನ್ನು ಬೆಚ್ಚಿ ಬೀಳಿಸಿದೆ. 


 ತೀರ್ಥಹಳ್ಳಿಯ ವಿಹಂಗಮ ರೆಸಾರ್ಟ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತ್ತಿದ್ದು ಪೊಲೀಸ್ ಸಿಬ್ಬಂದಿಗಳನ್ನು* ಒಳಗೊಂಡ ತಂಡವು ದಿನಾಂಕ : 12-08-2023 ರಂದು ರಾತ್ರಿ ಸ್ಥಳಕ್ಕೆ ಹೋಗಿ ದಾಳಿ ನಡೆಸಿ  *ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1) ಅಂದಾಜು ಮೌಲ್ಯ  1,00,000/- ರೂಗಳ  ಒಂದು ಡಬಲ್ ಬ್ಯಾರಲ್ ಬಂದೂಕು, 2) ಅಂದಾಜು ಮೌಲ್ಯ 25,000 /- ರೂಗಳ   310 ಜೀವಂತ ಗುಂಡುಗಳು    3) ಒಂದು ಕತ್ತಿ ಮತ್ತು ಒಂದು ಚಾಕು 4) ಮೂರು ಕಾಡು ಕೋಣದ ಕೊಂಬಿನ ಟ್ರೊಫಿ, 5) ಆರು ಜಿಂಕೆ ಕೊಂಬಿನ ಟ್ರೊಫಿ, 6) ಒಂದು ಸಿಸಿ ಟಿವಿ ಡಿವಿ ಆರ್ 7) ಅಂದಾಜು ಮೌಲ್ಯ 7,650/- ರೂ ಗಳ ಒಟ್ಟು 51 ಬಿಯರ್ ಟಿನ್ ಗಳು, 8) ಅಂದಾಜು ಮೌಲ್ಯ 1,00,000/- ರೂ ಗಳ ಮದ್ಯ ತುಂಬಿದ ಬಾಟಲ್ ಗಳು 9) ಅಂದಾಜು ಮೌಲ್ಯ 750/- ರೂ ಗಳ ಒಟ್ಟು 6 Breezer ಬಾಟಲ್ ಮತ್ತು 10) 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದು . ಪ್ರಕರಣವು ತನಿಕಾ ಹಂತದಲ್ಲಿದ್ದು ಅಧಿಕೃತ ಮಾಹಿತಿ ಪೋಲಿಸ್ ಇಲಾಖೆಯಿಂದ ಬರಬೇಕಾಗಿದೆ.

Post a Comment

Previous Post Next Post