ತೀರ್ಥಹಳ್ಳಿ :ಕಸ್ತೂರಿ ರಂಗನ್ ವರದಿ ಹೇಳಿಕೆ ವಿರುದ್ಧ ಸಚಿವರಾದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ


ರಾಜ್ಯ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು  ಮಲೆನಾಡಿಗರ ಬದುಕಿಗೆ ಮರಣ ಶಾಸನದಂತಿರುವ *ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು* ವರದಿ ಜಾರಿಗೊಳಿಸಲು ಪೂರಕವಾದ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಲೆನಾಡಿಗರ ಅದರಲ್ಲೂ ತೀರ್ಥಹಳ್ಳಿ ಕ್ಷೇತ್ರದ ಬಂಧುಗಳ ಬದುಕಿನ ಮೇಲೆ ಮರಣ ಮೃದಂಗ ಬಾರಿಸಿದಂತೆ ಆಗಿದೆ. 


ಕಾಂಗ್ರೆಸ್ ಸರ್ಕಾರದ ಸಚಿವರ ಈ ಹೇಳಿಕೆ ಹಾಗೂ ಕಾಂಗ್ರೆಸ್ ಸರ್ಕಾರದ ವಿವಿಧ ಜನ ವಿರೋಧಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿ ತಾಲೂಕು ಬಿಜೆಪಿ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕು ಕಛೇರಿ ಮುಂದೆ  ಇಂದು  ಶಾಸಕರಾದ *ಶ್ರೀ ಆರಗ ಜ್ಞಾನೇಂದ್ರ* ನೇತೃತ್ವದಲ್ಲಿ ಪ್ರತಿಭಟನೆ  ನಡೆಸಲಾಯಿತು.

ವರದಿಯನ್ನು ಜಾರಿ ಮಾಡದಂತೆ ಮಾನ್ಯ ತಹಸೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತುPost a Comment

Previous Post Next Post