ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಕಳ್ಳತನ ಆಗುವಂತೆ ಬಿಂಬಿಸಿ ದೇವಸ್ಥಾನದ ಪಾವಿತ್ರತೆಯನ್ನು ಹಾಗೂ ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕೆಲಸ ನಡೆದಿತ್ತ?

 


ದಿನಾಂಕ 03-08-2023 ರಂದು  ಚಂದ್ರಗುತ್ತಿ *ರೇಣುಕಾಂಬ ದೇವಸ್ಥಾನದಲ್ಲಿ* ಕಳ್ಳತನಕ್ಕೆ ಪ್ರಯತ್ನ ಪಟ್ಟ ಬಗ್ಗೆ, *ದೇವಸ್ಥಾನದ ಪ್ರಭಾರ ಕಾರ್ಯ ನಿರ್ವಣಾಧಿಕಾರಿ* ಶಿವಪ್ರಸಾದ್, 44 ವರ್ಷ ರವರು  ದೂರು  ನೀಡಿದ್ದರು

 ಬನವಾಸಿ ಬಸ್ ನಿಲ್ದಾಣದ ಬಳಿ ಪ್ರಕರಣದ *ಆರೋಪಿತರಾದ 1)ಪ್ರವೀಣ, 33 ವರ್ಷ, ಭೋವಿ ಕಾಲೋನಿ, ಚಂದ್ರಗುತ್ತಿ ಗ್ರಾಮ, ಸೊರಬ, 2) ದೇವರಾಜು, 50 ವರ್ಷ, ಭೋವಿ ಕಾಲೋನಿ, ಚಂದ್ರಗುತ್ತಿ ಗ್ರಾಮ,ಸೊರಬ, 3) ಭೀಮಪ್ಪ 35 ವರ್ಷ, ಬೋವಿ ಕಾಲೋನಿ, ಚಂದ್ರಗುತ್ತಿ ಗ್ರಾಮ, ಸೊರಬ* ರವರನ್ನು ವಶಕ್ಕೆ ಪಡೆದು *ವಿಚಾರಣೆಗೆ ಒಳಪಡಿಸಿದಾಗ ಆರೋಪಿ ದೇವರಾಜನು ದೇವಸ್ಥಾನದ ಕಮಿಟಿಗೆ ಸೇರಲು ಅರ್ಜಿಯನ್ನು ಸಲ್ಲಿಸಿದ್ದು ಈತನ ಅರ್ಜಿಯನ್ನು ತಿರಸ್ಕರಿಸಿದ ಹಿನ್ನಲೆಯಲ್ಲಿ, ಹಾಲಿ ದೇವಸ್ಥಾನ ಕಮೀಟಿಯ ಅಧ್ಯಕ್ಷನೇ ಇದಕ್ಕೆ ಕಾರಣ ಎಂದು ಭಾವಿಸಿ ದ್ವೇಷದಿಂದ ಅವರ ಹೆಸರಿಗೆ ಕಳಂಕ ತಂದು* ಅವರನ್ನು ಕಮಿಟಿಯಿಂದ ತೆಗೆಸುವ ಸಲುವಾಗಿ ದೇವಸ್ಥಾನ ಕಳ್ಳತನವಾಗಿರುವಂತೆ ಬಿಂಬಿಸಿ *ದೇವಸ್ಥಾನದ ಪಾವಿತ್ರತೆಯನ್ನು ಹಾಗೂ ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗುವಂತೆ ಮಾಡಲು ಕಳ್ಳತನಕ್ಕೆ ಪ್ರಯತ್ನ* ಮಾಡಿರುವುದು ವಿಚಾರಣೆಯಿಂದ ಕಂಡುಬಂದಿರುತ್ತದೆ. ನಂತರ ಆರೋಪಿತರನ್ನು *ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ* ಒಪ್ಪಿಸಲಾಗಿರುತ್ತದೆ.   

Post a Comment

Previous Post Next Post