ದಾವಣಗೆರೆ: ಬೈಕ್ ಕಳ್ಳತನ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ


ದಾವಣಗೆರೆ
:ಕಳ್ಳತನ‌ ಮಾಡಿದ ಬೈಕ್‌ ಗಳಿಗೆ ನಕಲಿ ದಾಖಲೆ ಸೃಷ್ಠಿಸಿದ ಆರ್ ಟಿಒ ಕಚೇರಿಯಲ್ಲಿ ನೋಂದಣಿ ಮಾಡಿದ ಆರೋಪದಡಿ, ಆರ್ ಟಿಒ ಕಚೇರಿ ನಾಲ್ವರು ಎಸ್ ಡಿ ಎ ಅಧಿಕಾರಿಗಳು ಹಾಗೂ ಒಬ್ಬ ಬ್ರೋಕರ್ ಅನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಸ್ಪಿ ಅರುಣ್ ಕೆ ತಿಳಿಸಿದ್ದಾರೆ.ಬಸವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 10 ಬೈಕ್ ಗಳ ಕಳ್ಳತನ ಪ್ರಕರಣಗಳ ವಿಚಾರಣೆ ವೇಳೆ, ಕಳ್ಳತನ ಮಾಡಿದ ಬೈಕ್ ಗಳಿಗೆ ನಕಲಿ ದಾಖಲೆ ಸೃಷ್ಠಿಸಿ ಆರ್ ಟಿಒ ಕಚೇರಿಯಲ್ಲಿ ನೋಂದಣಿ ಮಾಡಿರುವುದು ಪತ್ತೆಯಾಗಿದೆ. ಬೈಕ್ ನ ಮೂಲ ಮಾಲೀಕರು ಬೇರೆ ಇದ್ದರೂ ಸಹ, ನೋಂದಣಿ ವೇಳೆ ನಕಲಿ ಮಾಲೀಕ, ದಾಖಲೆ ಸೃಷ್ಠಿಸಿ ನೋಂದಾಯಿಸಿದ್ದಾರೆ. ಬೈಕ್ ನೋಂದಣಿಗೆ ಸಹಕಾರ ನೀಡಿದ ಆರ್ ಟಿಒ ಆಫೀಸ್ ನ ನಾಲ್ವರು ಎಸ್ ಡಿಎ ಅಧಿಕಾರಿಗಳು, ಬ್ರೋಕರ್ ರಸುಲ್ಲಾ ಬಂಧನ ಮಾಡಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ

 

Post a Comment

Previous Post Next Post