ಹೃದಯ ಸಂಬಂಧಿ ಖಾಯಿಲೆಯಿಂದ* ಬಳಲುತ್ತಿದ್ದು, ಈ ಬಾಲಕನಿಗೆ ತಾನು *ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ನನಸಾಗಿತ್ತು.



ಇದೇನಪ್ಪ ಇನ್ ಸ್ಪೆಟಕ್ಟರ್ ಅಂಜನ್ ಕುಮಾರ್ ಎಲ್ಲಿ ಹೋದರುಎಂದು ಅನುಮಾನ ಪಡ್ತಾ ಇದ್ದೀರ? ಅಂತಹದ್ದೇನು ಆಗಿಲ್ಲ. ಸ್ವತಃ ಅಂಜನ್ ಕುಮಾರ್ ಮೇಲಾಧಿಕಾರಿಗಳ ಅನುಮತಿ ಮೇರೆ ಮಗು ಆಜಾನ್ ಖಾನ್  ನ ಕೋರಿಕೆಯನ್ನ ಈಡೇರಿಸಿದ್ದಾರೆ. ಈ ಬೆಳವಣಿಗೆಯ ಹಿಂದೆ ಒಂದು ಹೃದಯ ವಿದ್ರಾವಕ ಕಥೆ ಇದೆ. 8½ ವರ್ಷದ ಮಗುವಿನ ಆಸೆಯನ್ನ ಠಾಣಾಧಿಕಾರಿ  ಅಂಜನ್ ಕುಮಾರ್ ಈಡೇರಿಸಿದ್ದಾರೆ.


ಇನ್ ಸ್ಪೆಕ್ಟರ್ ಧಿರಿಸಿನಲ್ಲಿ ಬಂದ ಆಜಾನ್ ಎಸ್ಪಿ ಸಾಹೇಬ್ರಿಗೆ ಧನ್ಯವಾದಗಳನ್ನ ಹೇಳಿದ್ದಾನೆ. ನಾನು ನನ್ನ ಅಪ್ಪನಿಗೆ ಒಂದು ದಿನ ಪಿಐ ಆಗ್ಬೇಕು ಎಂದು ಹೇಳಿದ್ದೆ. ಎಸ್ಪಿ ಸಾಹೇಬ್ರು ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾನೆ.‌ ಚಿಕ್ಕ ಗಳೂರು ಜಿಲ್ಲೆಯ ಬಾಳೇಹೊನ್ನೂರಿನ ತಂದೆ ತಬ್ರೇಜ್ ಖಾನ್ ಮತ್ತು ತಾಯಿ ನಗ್ಮಾ ರವರ ಸುಪುತ್ರ ಈ ಆಜಾನ್ ಖಾಬ್ ಆಗಿದ್ದಾನೆ.


ಇಂದು ದೊಡ್ಡಪೇಟೆ ಪೊಲೀಸ್ ಠಾಣೆಗೆ ನೂತನ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಎಂಟು ವರೆ ವರ್ಷದ ಆಜಾನ್ ಖಾನ್ ಅಧಿಕಾರ ಸ್ವೀಕರಿಸಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಅವರಿಗೆ ಹೂಗುಚ್ಛ ಕೊಟ್ಟು ಪಿಐ ಸೀಟ್ ನಲ್ಲಿ‌ಕುಳಿತು ಸಹಿ ಹಾಕಿ ಅಧಿಕಾರ ಸ್ವೀಕರಿಸಿದ್ದಾರೆ.

ಆಜಾನ್ ಖಾನ್ ಬಿನ್ ತಬ್ರೇಜ್ ಖಾನ್, 8 1/2 ವರ್ಷ, 1ನೇ ತರಗತಿ,* ವಾಸ ಸೂಳೆಬೈಲು, ಶಿವಮೊಗ್ಗ ಟೌನ್ ಹಾಲಿ ವಾಸ ಎನ್ ಆರ್ ಪುರ ರಸ್ತೆ, ಬಾಳೆಹೊನ್ನೂರು ಚಿಕ್ಕಮಗಳುರು ಈ ಬಾಲಕನು *ಹೃದಯ ಸಂಬಂಧಿ ಖಾಯಿಲೆಯಿಂದ* ಬಳಲುತ್ತಿದ್ದು, ಈ ಬಾಲಕನಿಗೆ ತಾನು *ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ* ಇರುತ್ತದೆ. ಆದ್ದರಿಂದ ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ *ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಸಮ್ಮುಖದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈ ದಿನ ದಿನಾಂಕ 16-08-2023 ರಂದು ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ *ಬಾಲಕ ಆಜಾನ್ ಖಾನ್ ನಿಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ಅವಕಾಶ* ಮಾಡಿಕೊಡಲಾಯಿ ತು.

Post a Comment

Previous Post Next Post