ಶಿವಮೊಗ್ಗ: ಬ್ಯಾನರ್, ಪೋಸ್ಟರ್ ಎಲ್ಲರೂ ಹಾಕುತ್ತಾರೆ: ಆದರೆ ಪ್ರಚೋದನಕಾರಿ ಬ್ಯಾನರ್, ಕಟೌಟ್ ಹಾಕಿ ಗಲಭೆ ಸೃಷ್ಟಿ ಮಾಡಿದ್ದಾರಾ.!

 ಶಿವಮೊಗ್ಗದ ರಾಗಿಗುಡ್ಡದಲ್ಲಿ ಕೋಮು ಗಲಭೆ ಉಂಟಾಗಿದ್ದು, ಕೋಮು ಸೂಕ್ಷ್ಮ ಜಿಲ್ಲೆಯಾದ ಶಿವಮೊಗ್ಗ ಮತ್ತೊಮ್ಮೆ ಹಿಂದೂ ಮುಸ್ಲಿಂ ಸಮುದಾಯಗಳ್ ನಡುವೆ ಗದ್ದಲಕ್ಕೆ ಕಾರಣವಾಗಿದೆ. ಇಷ್ಟು ದಿನ ತಣ್ಣಗಿದ್ದ ಶಿವಮೊಗ್ಗ ಮತ್ತೆ ರಣರಂಗವಾಗಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ.

 ರಾಗಿಗುಡ್ಡದಲ್ಲಿ ಪ್ರಚೋದನಾಕಾರಿ ಕಟೌಟ್ ಹಾಕಿದ್ದೆ ಈ ಗಲಭೆಗೆ ಕಾರಣವಾಯ್ತ.! ಪೊಲೀಸರು ಈ ರೀತಿ ಪ್ರಚೋದನಾಕಾರಿ ಕಟೌಟ್ ಹಾಕಲು ಯಾಕೆ ಅನುಮತಿ ನೀಡಿದರು.! ಕಟೌಟ್, ಬ್ಯಾನರ್ ಹಾಕುವ ಮೊದಲೇ ಪೊಲೀಸರು ಈ ವಿಕ್ಷಯದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಇಂದು ಈ ರೀತಿ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ.


ಮುಸ್ಲಿಂ ಸಮುದಾಯದವರು ಬೇಕಂತಲೇ ಈ ರೀತಿಯಾದ ಪ್ರಚೋದನಾಕಾರಿ ಪೋಸ್ಟರ್ ಗಳನ್ನು ಹಾಕಿದ್ದಾರಾ! ಅವರು ಹಾಕಿರುವಂತಹ ಪೋಸ್ಟರ್ ಗಳನ್ನು ಗಮನಿಸುತ್ತಿದ್ದರೆ ಉದ್ದೇಶಪೂರ್ವಕವಾಗಿಯೇ ಅವರು ಈ ರೀತಿ ಮಾಡಿರಬಹುದು ಎಂಬ ಅನುಮಾನ ಮೂಡುತ್ತಿದೆ.! ಅವರ ಉದ್ದೇಶ ಒಳ್ಳೆಯದೋ, ಕೆಟ್ಟದ್ದೋ ಗೊತ್ತಿಲ್ಲ, ಆದರೆ ಅದರಿಂದ ಇಡೀ ಶಿವಮೊಗ್ಗ ಜಿಲ್ಲೆ ಶಾಂತಿ ಕಳೆದುಕೊಂಡಿದೆ. ಎಲ್ಲೂ ನೋಡಿದರು ಗೊಂದಲದ ಪರಿಸ್ಥಿತಿ ಉಂಟಾಗಿದೆ.

 ಮೊದಲೇ ಶಿವಮೊಗ್ಗದಲ್ಲಿ ಈ ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಗಲಭೆ ನಡೆಯುತ್ತಲೇ ಇರುತ್ತದೆ. ಆದರೆ ಈ ಭಾರಿ ಮತ್ತೊಮ್ಮೆ ಈ ರೀತಿ ಅಹಿತಕರ ಘಟನೆ ಸಂಭವಿಸಿರುವುದು ಬೇಸರದ ಸಂಗತಿಯಾಗಿದೆ.

ಪ್ರತಿ  ಬಾರಿಯೂ ಕಟೌಟ್ , ಪೋಸ್ಟರ್ ಎಲ್ಲವನ್ನೂ ಹಾಕುತ್ತಿದ್ದರು ಆದರೆ ಈ ಬಾರಿ ಬೇರೆಯದೆ ರೀತಿಯಲ್ಲಿ ಹಾಕಿದ್ದಾರೆ.! ಹಾಕಿರುವಂತಹ ಕೆಲವೊಂದು ಪೋಸ್ಟರ್ ಗಳು ಪ್ರಚೋದನಾಕಾರಿಯಾಗಿದೆ. ಉದ್ದೇಶ ಏನೇ ಆಗಿರಲಿ ಈ ಕಾರಣದಿಂದ ಅಸಹಾಯಕ ಜನರು ಕಷ್ಟಪಡುವಂತಾಗಿದೆ. ಇದರಿಂದ ಕಾರ್, ಬೈಕ್ ಗಳೆಲ್ಲವನ್ನು ಹಾನಿಮಾಡಲಾಗಿದೆ. ಜೊತೆಗೆ ಅನೇಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Post a Comment

Previous Post Next Post