ಶಿವಮೊಗ್ಗ: ವೈಯಕ್ತಿಕವಾಗಿ ಸಂಘದ ಹಣ ದುರ್ಬಳಕೆ ಮಾಡಿಕೊಂಡ ಪ್ರಭಾರ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ! ನಾಪತ್ತೆ ಆಗಿರುವುದು ನಿಜಾನಾ! ನಾಟಕಾನಾ!.

ಸಂತೋಷ್ ಕೃಷ್ಣನಾಯ್ಕ್ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಹುಂಚ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರು ಹಾಲಿ  ತಿಳಿಗಿಬೈಲು ಮೂನಿಯೂರು ಅಂಚೆ ತೀರ್ಥಹಳಿ ತಾಲ್ಲೂಕು ವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ಪ್ರಭಾರಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಆದರೆ, ದಿನಾಂಕ 09/10/2023 ರಂದು ಮಂಡಳಿ ಜಮಾ-ಖರ್ಚಿನ ಚರ್ಚೆ ನಡೆದಾಗ ಜೊತೆಗೆ ಪುಸ್ತಕಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ವ್ಯತ್ಯಾಸಗಳು ಕಂಡುಬಂದಿತ್ತು. ಹಾಗೂ ಹನವನ್ನು ಬ್ಯಾಂಕಿಗೆ ಜಮಾ ಮಾಡದೆ ಇರುವುದರ ಬಗ್ಗೆ ತಿಳಿದ ಕೂಡಲೆ  ಈ ವಿಷಯಕ್ಕೆ ಸಂಬಂಧಪಟ್ಟಂತೆ ಅವರನ್ನು ವಿಚಾರಿಸಿದಾಗ ಹಣವನ್ನು ಅವರು ತನ್ನ ಸ್ವಂತ ವೈಯಕ್ತಿಕ ವ್ಯವಹಾರಕ್ಕೆ ಬಳಸಿಕೊಳ್ಡಿದ್ದೇನೆಂದು ತಪ್ಪು ಒಪ್ಪಿಕೊಂಡು ಸ್ವಲ್ಪ ಕಾಲಾವಕಾಶ ಕೇಳಿಕೊಂಡಿದ್ದರು. ತಾವು ಬಳಸಿಕೊಂಡಿರುವ ಹಣವನ್ನು ಜಮಾ ಮಾಡಿ ಪುಸ್ತಕಗಳನ್ನು ಸರಿಪಡಿಸಿ ಕೊಡುವುದಾಗಿ ಮೌಖಿಕವಾಗಿ ಹೇಳಿ ತಪ್ಪು ಒಪ್ಪಿಕೊಂಡಿದ್ದರು.

 ಈ ವರೆಗೂ ಕಛೇರಿಗೆ ಗೈರಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ! ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಸೇರಿ ರಿಪ್ಪನ್ ಪೇಟೆ ಸಬ್ ಇನ್ಸ್ ಪೆಕ್ಟರ್ ಗೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಪತ್ರ ಸಹ ಬರೆದಿದ್ದಾರೆ ಆದರೆ ಆ ವ್ಯಕ್ತಿ ಇನ್ನೂ ಸಹ ಪತ್ತೆಯಾಗಿಲ್ಲ! ಈ ರೀತಿ ತನ್ನ ವೈಯಕ್ತಿಕ ಜೀವನಕ್ಕೆ ಹಣವನ್ನು ಬಳಸಿಕೊಂಡು ಕಾಣೆಯಾಗಿರುವುದು ಖಂಡನೀಯವಾಗಿದೆ! ಬಳಸಿಕೊಂಡಿರುವ ಹಣವನ್ನು ಹಿಂದಿರುಗಿಸುವ ವಿಷಯಕ್ಕೆ ಈ ರೀತಿ ಕಾಣೆಯಾಗಿದ್ದಾರಾ!Post a Comment

Previous Post Next Post