ಶಿವಮೊಗ್ಗ :ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಬ್ಲಾಕ್ ಸ್ಮಿತ್ ಮತ್ತು ವೆಲ್ಡಿಂಗ್ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ!:ದೋಷಪೂರಿತ ಸೈಲೆನ್ಸರ್ ಗಳ ವಶ.

 

ಈ ದಿನ ದಿನಾಂಕ: 30-10-2023 ರಂದು ಶ್ರೀ ಸುರೇಶ್ ಎಂ, ಡಿವೈಎಸ್.ಪಿ, ಶಿವಮೊಗ್ಗ ಬಿ ಉಪ ವಿಭಾಗ ಮತ್ತು ಶ್ರೀ ಸಂತೋಷ್ ಕುಮಾರ್ ಡಿ. ಕೆ ಸಿಪಿಐ ಶಿವಮೊಗ್ಗ ಸಂಚಾರ ವೃತ್ತ ರವರ ಮಾರ್ಗದರ್ಶನದಲ್ಲಿ ಶ್ರೀ ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳನ್ನೊಗೊಂಡ ತಂಡವು ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಬ್ಲಾಕ್ ಸ್ಮಿತ್ ಮತ್ತು ವೆಲ್ಡಿಂಗ್ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ, ದೋಷಪೂರಿತ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿರುತ್ತಾರೆ ಮತ್ತು ದೋಷಪೂರಿತ ಸೈಲೆನ್ಸರ್ ಗಳನ್ನು ದ್ವಿ ಚಕ್ರ ವಾಹನಗಳಿಗೆ ಅಳವಡಿಸಿಕೊಟ್ಟಲ್ಲಿ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿರುತ್ತದೆ.Post a Comment

Previous Post Next Post