ಯಾವುದೇ ಎನ್ ಕೌಂಟರ್ ನಡೆದಿಲ್ಲ ! ಸುಳ್ಳು ಸುದ್ದಿ ಹರಡಿದರೆ ಕಠಿಣಕ್ರಮ ! ಎಸ್.ಪಿ ಮಿಥುನ್ ಕುಮಾರ್ ಖಡಕ್ ವಾರ್ನಿಂಗ್

 

ಶಿವಮೊಗ್ಗ : ಶಿವಮೊಗ್ಗದ ರಾಗಿಗುಡ್ಡದ ಗಲಭೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು. ಶಿವಮೊಗ್ಗ ಎಸ್. ಪಿ ಮಿಥುನ್ ಕುಮಾರ್ ಸುಳ್ಳು ಸುದ್ದಿ ಹರಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ರಾಗಿಗುಡ್ಡದಲ್ಲಿ ಪೊಲೀಸರಿಂದ ಎನ್ ಕೌಂಟರ್ ನಡೆದಿದೆ ಎಂದು ಫೇಕ್ ನ್ಯೂಸ್ ಒಂದು ಹರಿದಾಡುತ್ತಿದೆ, ಶಿವಮೊಗ್ಗದಲ್ಲಿ ಯಾವುದೇ ಎನ್ ಕೌಂಟರ್ ನಡೆದಿಲ್ಲ, ಸುಳ್ಳು ಸುದ್ದಿ ಹರಿಡಿಸಲು

ಪ್ರಯತ್ನ ಪಟ್ಟರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗವುದು ಎಂದು ನೇರವಾಗಿ ಹೇಳಿದ್ದಾರೆ.

ಇನ್ನು ಸಾಕ್ಷಿ ಸಮೇತ ಫೋಟೋ ಅಪ್ಲೋಡ್ ಮಾಡಿರುವ ಎಸ್.ಪಿ ಮಿಥುನ್ ಕುಮಾರ್ ಎಲ್ಲೋ, ಯಾರೋ ಬಿದ್ದಿರುವ, ಯಾವಾಗೋ ಘಟನೆ ನಡೆದಿರುವ ದೃಶ್ಯವನ್ನು ಹರಡಿ ಎನ್ ಕೌಂಟರ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಇಂಥವರಿಗೆ ಎಸ್. ಪಿ ಮಿಥುನ್ ಕುಮಾರ್ ಲಾಸ್ಟ್ ವಾರ್ನಿಂಗ್ ಕೊಟ್ಟಿದ್ದಾರೆ

Post a Comment

Previous Post Next Post