14 ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿಗೆ ಬಂಪರ್ ಆಫರ್; ರೈತರಿಗೆ ಸಿಗಲಿದೆ ಶೇ.90ರಷ್ಟು ಸಹಾಯಧನ!

 ಚಿಕ್ಕಬಳ್ಳಾಪುರ: ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ 14 ಜಿಲ್ಲೆಗಳಲ್ಲಿ ಅಟಲ್ ಭೂಜಲ ಯೋಜನೆಯಡಿ ನೀರಿನ ಮಿತ ಬಳಕೆಗೆಅನುಕೂಲವಾಗುವಂತೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ರಾಜ್ಯದ ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ. ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿ ಯಶಸ್ವಿ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದ್ದು, ರೈತರು ಸದುಪ ಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.


ಎಲ್ಲರಿಗೂ ಅನ್ವಯಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆ ಮತ್ತು ಅಟಲ್ ಭೂಜಲ್ ಯೋಜನೆಯಡಿ ಸೂಕ್ಷ್ಮನೀರಾವರಿ ಘಟಕಗಳನ್ನು (ತುಂತುರು ಮತ್ತು ಹನಿ ನೀರಾವರಿ) ಕೃಷಿ ಬೆಳೆಗಳಿಗೆ ನೀಡಲು ಆದೇಶ ಹೊರಡಿಸಲಾಗಿದೆ. మిತಿ ಮೀರಿದ ಅಂತರ್ಜಲ ಬಳಕೆ ಹಾಗೂ ಬರ ಪೀಡಿತ ತಾಲೂಕುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳು ಈ ವ್ಯಾಪ್ತಿಗೆ ಬರಲಿದ್ದು ಯಾರು ಬೇಕಾದರೂ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು.

ಶೇ.90ರಷ್ಟು ಸಬ್ಸಿಡಿ

ತುಂತುರು ನೀರಾವರಿ ಘಟಕಗಳನ್ನು ಜಿಲ್ಲೆಯ ಜ ಎಲ್ಲ ವರ್ಗದ ರೈತರಿಗೆ ತಾಲೂಕುಗಳು ಈ ವ್ಯಾಪ್ತಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90ರಷ್ಟು ಯಾರೂ ಬೇಕಾದರೂ ಯೋಜನೆ ಮತ್ತು ಹನಿ ನೀರಾವರಿ ಘಟಕಗಳನ್ನು ಸಣ್ಣ ಅತಿ ಸಣ್ಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ಮತ್ತು ಇತರೆ ವರ್ಗದ ರೈತರಿಗೆ ಶೇ.45ರ ಸಹಾಯದನದಲ್ಲಿ ವಿತರಿಸಲು ನಿರ್ಧರಿಸಲಾಗಿದೆ.

40ಲಕ್ಷ ರೂ. ವರೆಗೆ ಸಹಾಯಧನ:ಅಟಲ್ ಭೂ ಜಲ್ ಯೋಜನೆಯಡಿ ಜಿಲ್ಲೆಯ ಎಲ್ಲ ತಾಲೂಕುಗಳು ಮತ್ತು ಎಲ್ಲ ಗ್ರಾಮ ಪಂಚಾಯಿತಿಗಳು ಒಳಪಟ್ಟಿದ್ದು, ಪ್ರತಿ ಗಾಮ ಪಂಚಾಯಿತಿಗೆ 40 ಲಕ್ಷ ರೂ. ವರೆಗೆ ಸೂಕ್ಷ್ಮ ನೀರಾವರಿ ಘಟಕಗಳಿಗೆ ಸಹಾಯಧನ ನೀಡಲು ಅವಕಾಶವಿದೆ. ಹೀಗಾಗಿ ಎಲ್ಲ ರೈತರಿಗೂ ಇದು ಸುವರ್ಣವಕಾಶವಿದ್ದು, ಯೋಜನೆಯಡಿ ಮೊದಲು ಬಂದವರಿಗೆ ಆದಷ್ಟು ಬೇಗ ರೈತರು ನೋಂದಣಿ ಮಾಡಿಕೊಂಡರೆ ಸರಕಾರದಿಂದ ಸಿಗುವ ಸಹಾಯಧನ ಪಡೆಯಬಹುದು.

ಬರ ಹಿನ್ನೆಲೆ ವಿಶೇಷ ಯೋಜನೆ
ಸೂಕ್ಷ್ಮ ನೀರಾವರಿ ಪದ್ಧತಿ ಆಳವಡಿಕೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಆಟಲ್ ಭೂ ಜಲ್ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಕೃಷಿ ಬೆಳೆಗಳಲ್ಲಿ ನೀರಿನ ಮಿತ ಬಳಕೆಗಾಗಿ ಈ ಯೋಜನೆಯನ್ನು ಯಶಸ್ವಿ ಯಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸ ಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೇಸಿಗೆ ಕಾಲದಲ್ಲಿ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗ ಬಹುದು. ಹೀಗಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇತ್ತೀಚೆಗೆ ಬರ ವೀಕ್ಷಣೆಗೆ ಕೇಂದ್ರ ಅಧ್ಯಯನ ಸಮಿತಿ ಬಂದ ವೇಳೆ ಜಿಲ್ಲೆಯ ಬರ ಪರಿಸ್ಥಿತಿಯನ್ನು ವಿವರಿಸುವ ವೇಳೆ ತುಂತುರು ಮತ್ತು ಹನಿ ನೀರಾವರಿ ಅವಶ್ಯಕತೆಯನ್ನು ಮನದಟ್ಟು ಮಾಡಲಾಗಿತ್ತು. ಹೀಗಾಗಿ అంకశాల విడితే జల్లీ ఎందు జిల్లాయ ಎಲ್ಲ ಭಾಗದ ಎಲ್ಲ ವರ್ಗದ ರೈತರಿಗೂ ಅನುಕೂಲವಾಗುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.

ಮೊದಲು ಬಂದವರಿಗೆ ಆದ್ಯತೆ
ಸದ್ಯ ಈ ಯೋಜನೆಯಡಿ ಮೊದಲು ಬಂದವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ನಿಗದಿತ ಅನುದಾನ ಮುಗಿದ ನಂತರ ನೋಂದಣಿ ಯಾದವರಿಗೆ ಅವಕಾಶ ಸಿಗದೇ ಹೋಗಬಹುದು. ಹೀಗಾಗಿ ರೈತರು ಆದಷ್ಟು ಬೇಗ ನೋಂದಣಿ ಮಾಡಿಕೊಂಡರೆ ಈ ಸೂಕ್ಷ್ಮ ನೀರಾವರಿ ಯೋಜನೆಯ ಅನುಕೂಲ ಪಡೆಯಬಹುದು. ಇಲ್ಲವಾದಲ್ಲಿ ವಂಚಿತ ರಾಗುವ ಸಾಧ್ಯತೆ ಇರುತ್ತದೆ, ಜಿಲ್ಲೆಯ ಎಲ್ಲ ವರ್ಗದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಯೋಜನೆಯ ಮಾಹಿತಿ ಪಡೆಯಬಹುದು. ಸೂಕ್ತ ದಾಖಲೆ ಗಳೊಂದಿಗೆ ನೋಂದಣಿ ಮಾಡಿಕೊಂಡರೆ ತುಂತುರು ಮತ್ತು ಹನಿ ನೀರಾವರಿ ಅಳವಡಿಕೆಗೆ ಶೇ.90 ರವರೆಗೂ ಸಹಾಯಧನ ಸಿಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ಜಾವೀದಾ ನಾಸೀಮಾ ಖಾನಂ. 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಭೂ ಜಲ್ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಗಳನ್ನು (ತುಂತುರು ಮತ್ತು ಹನಿ ನೀರಾವರಿ) ಕೃಷಿ ಬೆಳೆಗಳಿಗೆ ನೀಡಲು ಕೃಷಿ ಇಲಾಖೆಯಿಂದ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಆಟಲ್ ಭೂಜಲ್ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕು ಗಳು ಮತ್ತು ಎಲ್ಲ ಗ್ರಾಪಂಗಳು ಒಳಪಟ್ಟಿದ್ದು, ಪ್ರತಿ ಗಾಮ ಪಂಚಾಯಿತಿಗೆ 40 ಲಕ್ಷ ರೂ. ವರೆಗೆ ಸೂಕ್ಷ್ಮ ನೀರಾವರಿ ಘಟಕಗಳಿಗೆ ಸಹಾಯಧನ ನೀಡಲು ಅವಕಾಶವಿದೆ. ಈ ಯೋಜನೆಯನ್ನು ಜಿಲ್ಲೆಯ ಎಲ್ಲ ವರ್ಗದ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.


Post a Comment

Previous Post Next Post