ಶಿವಮೊಗ್ಗ ಫ್ರೀಡಂ ಪಾರ್ಕ್ ಅಲ್ಲಿ ಬರ್ಬರ ಕೊಲೆ ಚಟ್ಟಪಟ್ಟ ನಗರ ಶಶಿಯ ಹತ್ಯೆ

 ಶಿವಮೊಗ್ಗ ಫ್ರಿಡಂಪಾರ್ಕ್ ಆಟೋ ಸ್ಟ್ಯಾಂಡ್ ಬಳಿಯಲ್ಲಿ ಓರ್ವ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಶಿವಮೊಗ್ಗದ ಜಟ್ ಪಟ್ ನಗರ ನಿವಾಸಿ ಶಶಿ ಎಂಬಾತನ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಇದೊಂದು ರೌಡಿ ವಲಯದ ಹಲ್ಲೆ ಪ್ರಕರಣ ಎಂದು ತಿಳಿದುಬಂದಿದೆ. ಕನ್ನಡ ರಾಜ್ಯೋತ್ಸವದ ವಿಚಾರದಲ್ಲಿ ನಡೆದ ಕಿರಿಕ್ ವಿಚಾರವಾಗಿ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ರೀಡಂ ಪಾರ್ಕ್ ಬಳಿಯಲ್ಲಿ ಶಶಿಯ ಮೇಲೆ ಹಲ್ಲೆ ನಡೆಸಲಾಗಿದೆ. ಮಾರಕಾಸ್ತ್ರಗಳಿಂದ ಶಶಿಯ ಮೇಲೆ ಹಲ್ಲೆ ಮಾಡಲಾಗಿದ್ದು ತೀವ್ರವಾಗಿ ಶಶಿ ಗಾಯಗೊಂಡಿದ್ದಾನೆ.

ವಿನೋಬನಗರ ಪೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಈ ಹಿಂದೆ ಹತ್ಯೆಯಾಗಿದ್ದ ಮೆಂಟಲ್ ಸೀನಾನ ಜೊತೆಗಿದ್ದ ಆತನ ಸಹಚರ ಕೂಡ ಇವತ್ತಿನ ಘಟನೆಯಲ್ಲಿದ್ದ ಎಂದು ಹೇಳಲಾಗಿದೆ. ಹಳೆಯ ಕಿರಿಕ್ ನ್ನ ಹೊಂದಿದ್ದ ರೌಡಿಶೀಟರ್ ಮತ್ತು ಕನ್ನಡ ರಾಜ್ಯೋತ್ಸವದ ವೇಳೆ ನಡೆದ ಕಿರಿಕ್ ಪ್ರಕರಣದಲ್ಲಿದ್ದ ಆರೋಪಿ ಇಬ್ಬರು ಸೇರಿಕೊಂಡು ಶಶಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಉಳಿದಂತೆ ಆರೋಪಿಗಳ ಹೆಸರು ಹಾಗೂ ವಿವರ ಮತ್ತು ತತ್ತಕ್ಷಣದ ಕಾರಣವನ್ನು ಪೋಲೀಸ್ ಇಲಾಖೆ ಸ್ಪಷ್ಟಪಡಿಸಬೇಕಿದೆ.

Post a Comment

Previous Post Next Post