ಬ್ಯಾಂಕ್ ಅಧಿಕಾರಿಗಳು ಎಂದು‌ ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಇಬ್ಬರು ಅಂದರ್-ಇನ್ನಿಬ್ಬರಿಗಾಗಿ ಬಲೆಬೀಸಿದ ಪೊಲೀಸರು

 ಬಿ.ಬೀರನಹಳ್ಳಿಯಲ್ಲಿ ಬ್ಯಾಂಕ್ ಲೋನ್ ವಿಚಾರಣೆ ಅಧಿಕಾರಿಗಳ ಸೋಗಿನಲ್ಲಿ ಮನೆ ದೊಚಿ ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆಮಾಡುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಭದ್ರಾವತಿ ಹಳೆ ಭಂಡಾರದಹಳ್ಳಿಯ ನಿವಾಸಿಗಳಾದ ದರ್ಶನ್ (22) ವಿಜಯ್ (23) ಬಂಧಿತ ಆರೋಪಿಗಳು. ಇನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಭದ್ರಾವತಿಯ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ನಾಲ್ಕು ಜನ ಆರೋಪಿಗಳು ದುಶ್ಚಟಗಳಿಗೆ ಹಣ ಹೊಂದಿಸಲು ಕಳ್ಳತನ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದೇ ಡಿ.11 ರಂದು ಭದ್ರಾವತಿ ಮೂಲದ ನಾಲ್ಕು ಜನ ಸ್ನೇಹಿತರ ತಂಡ ಬಿ.ಬೀರನಹಳ್ಳಿಯಲ್ಲಿ ಬ್ಯಾಂಕ್ ಅಧಿಕಾರಿಗಳು ಎಂದುಕೊಂಡು ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಡಿ.11 ರಂದು ನಡೆದಿದ್ದು ಏನು

ಬಿ.ಬೀರನಹಳ್ಳಿಯಲ್ಲಿ ಹರ್ಷಿತ್ ಕನಕಾನಂದ ಎಂಬುವರ ಮನೆಗೆ ಇಬ್ಬರು ಅಪರಿಚಿತರು ಬಂದು ನಾವು ಬ್ಯಾಂಕ್ ಲೋನ್ ವಿಚಾರಣೆ ಮಾಡುವ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಹರ್ಷಿತ್  ಯಾವ ಬ್ಯಾಂಕ್ ಎಂದು ಕೇಳಿದ್ದಕ್ಕೆ ಮತ್ತೋರ್ವ ನೀರು ಕೇಳಿದ್ದಾನೆ. ನೀರು ತರಲು ಹೋದ ಹರ್ಷಿತ್ ನ ಹಿಂದೆನೆ ನಡೆದ ಅಪರಿಚಿತರು ಏಕಾಏಕಿ  ಅಡುಗೆ ಮನೆಯೊಳಗೆ ನುಗ್ಗಿದ್ದಾರೆ.


ಓರ್ವ ಹರ್ಷಿತ್ ಕನಕಾನಂದರ ಬಾಯಿ ಮುಚ್ಚಿದ್ದಾರೆ.  ಇನ್ನೊಬ್ಬ  ಬಾಯಿಗೆ ಬಟ್ಟೆಯನ್ನು ಕಟ್ಟಿ  ಮನೆಯ ಮಾಸ್ಟರ್ ಬೆಡ್ ರೂಂಗೆ ಕರೆದುಕೊಂಡು ಹೋಗಿದ್ದಾನೆ.  ಅಲ್ಲಿ ಒಬ್ಬ ಅಸಾಮಿಯು ತನ್ನ ಬಲಗೈಯಿಂದ ಪಿರ್ಯಾದಿದಾರರ ಎಡ ಕಪಾಳಕ್ಕೆ ಹೊಡೆದು ಹಣವನ್ನು ಕೊಡು ಅಂತಾ ಹೇಳಿದ್ದಾನೆ.  ಆಗ ಹಣವಿಲ್ಲ ಅಂತಾ ಹೇಳಿದಾಗ ಆ ಬೆಡ್ ರೂಮ್ ನ ವಾಡ್ರೂಬ್ ಚೆಕ್ ಮಾಡಿ ಅಲ್ಲಿದ್ದ ಬೀಗದ ಕೀ ಗಳನ್ನು ತಗೆದುಕೊಂಡು  ಇನ್ನೊಂದು ಬೆಡ್ ರೂಂಮ್ ಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿದ್ದ ಗಾದ್ರೇಜ್ ಬೀಗವನ್ನು ಅವರ ಬಳಿ ಇದ್ದ ಕೀಯಿಂದ ತಗೆದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಮೊಬೈಲ್  ಬೆದರಿಕೆ ಹಾಕಿ ಒಟ್ಟು 1,13,000/- ರೂ ಮೌಲ್ಯದ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ. ಆಗ ಹರ್ಷಿತ್ ಗಾಬರಿಗೊಂಡು ತಲೆ ಸುತ್ತು ಬಂದು ಅಲ್ಲೇ ಬಿದ್ದಿದ್ದಾರೆ. ಸ್ವಲ್ಪ ಸಮಯದ ನಂತರ  ಮನೆಗೆ ಬಂದ ತಂದೆ 26 ವರ್ಷದ ಮಗನನ್ನ‌ ಉಪಚರಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ದಿನ ಹೊಳೆಹೊನ್ನೂರು‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Post a Comment

Previous Post Next Post