"ಋಣ" ಬಹುಭಾಷಾಗಳ ಕಿರುಚಿತ್ರ ಮುಹೂರ್ತ.

 ಬಂಜಾರ, ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬರುತ್ತಿರುವ ಋಣ ಕಿರು ಚಿತ್ರದ ಮುಹೂರ್ತ ಪೂಜಾ ಕಾರ್ಯಕ್ರಮ ಭಾನುವಾರ ನಡೆಯಿತು. ಲೋಕೇಶ್ ಕಿರಿಯ ಇಂಜಿನಿಯರ್ ಮೆಸ್ಕಾಂ ಮತ್ತು ಸೋಮೇಶ್ ಕಬ್ಬೂರ್ ಕಿರಿಯ ಇಂಜಿನಿಯರ್ ಕೆಪಿಟಿಸಿಎಲ್ ಇವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ಅಶ್ವಿನಿ ಆರ್ ರಾಠೋಡ್ ನಿರ್ಮಾಣ ಮತ್ತು ರಾಮು ಎನ್ ರಾಠೋಡ್ ‌ಮಸ್ಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಗೋಪಾಲ ಬಿ. ನಾಯ್ಕ್ ಸಹ ನಿರ್ದೇಶನದ ಜೊತೆಗೆ ಅಭಿನಯಿಸುತ್ತಿದ್ದಾರೆ. ಕಿರಣ್ ವೈ ರಾಠೋಡ್ ಅವರ ಛಾಯಾಗ್ರಹಣ ಮತ್ತು ಆದಿತ್ಯ ಶಿವಮೊಗ್ಗ ಅವರ ಸಂಕಲನ ಇದೆ.

ತಾರಾಗಣದಲ್ಲಿ ತಿರುಮಲೇಶ್ ಮೆಸ್ಕಾಂ ಶಿವಮೊಗ್ಗ, ಶ್ರೀದೇವಿ ಹೊಸಮನಿ ಶಿವಮೊಗ್ಗ, ಸೇನಾ ನಾಯ್ಕ್, ಹೇಮ್ಲಿ ಬಾಯಿ, ಯೋಗೇಂದ್ರ ಕುಮಾರ ಸಿ, ಚಂದನ, ಮಾಸ್ಟರ್ ಶಮಂತ ಅಭಿನಯಿಸುತ್ತಿದ್ದಾರೆ.


Post a Comment

Previous Post Next Post