ದಸರಾ ಆನೆ ಅರ್ಜುನ ಸಾವು: ಉನ್ನತ ತನಿಖೆಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

 ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದನ್ನು ಖಂಡಿಸಿದ್ದ ಕನ್ನಡ ಚಲುವಳ್ಳಿ ಮುಖಂಡ ವಾಟಾಳ್ ನಾಗರಾಜ್ ಅವರು, ಮಂಗಳವಾರ ಅರಣ್ಯ ಭವನದಲ್ಲಿ ಪ್ರತಿಭಟನೆ ನಡೆಸಿದರು.

                                                                ವಾಟಾಳ್ ನಾಗರಾಜ್

Posted By : Rekha.M
Source : Online Desk

ಬೆಂಗಳೂರು: ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದನ್ನು ಖಂಡಿಸಿದ್ದ ಕನ್ನಡ ಚಲುವಳ್ಳಿ ಮುಖಂಡ ವಾಟಾಳ್ ನಾಗರಾಜ್ ಅವರು, ಮಂಗಳವಾರ ಅರಣ್ಯ ಭವನದಲ್ಲಿ ಪ್ರತಿಭಟನೆ ನಡೆಸಿದರು.

ಆನೆ ಅರ್ಜುನನ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆನೆಗೆ ವಯಸ್ಸಾಗಿತ್ತು. ಆದರೂ ಕಾಡಾನೆ ಸೆರೆ ಹಿಡಿಯಲು ಕಾರ್ಯಾಚರಣೆಗೆ ಏಕೆ ಕರೆದೊಯ್ಯಲಾಗಿತ್ತು? ಆನೆ ಕಾಡಿನಲ್ಲೇ ಇರುವಾಗ ಅದನ್ನು ಸೆರೆ ಹಿಡಿಯುವ ಅಗತ್ಯವೇನಿತ್ತು? ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅರ್ಜುನ ಸಾವನ್ನಪ್ಪಿದ್ದಾನೆಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಖಾಡೆ ಅವರು, ಕಾಡು ಆನೆಗಳು ಮನುಷ್ಯರೊಂದಿಗೆ ಸಂಘರ್ಷಕ್ಕೆ ಇಳಿದು ಬೆಳೆ ಮತ್ತು ಮಾನವನ ನಷ್ಟಕ್ಕೆ ಕಾರಣವಾಗುವುದರಿಂದ ಆನೆ ಹಿಡಿಯುವ ಕಾರ್ಯಾಚರಣೆ ಅಗತ್ಯವಿತ್ತು. ಇದು ಅಪಾಯಕಾರಿ ಕಾರ್ಯಾಚರಣೆಯಾಗಿತ್ತು. ಅರ್ಜುನ್ ಎಲ್ಲಾ ಇತರೆ ಆನೆಗಳಿಗಿಂತ ಉತ್ತಮನಾಗಿದ್ದ. ಆದರೆ, ಅರ್ಜುನನ ಸಾವಿನ್ನಪ್ಪಿರುವುದರಿಂದ ನಮಗೆಲ್ಲರಿಗೂ ಬಹಳ ದುಃಖವಾಗಿದೆ. ಅರ್ಜುನ ನಮಗೆ ಕುಟುಂಬದ ಸದಸ್ಯನಾಗಿದ್ದ. ಆದರೆ, ಅಪಾಯಕಾರಿ ಕಾರ್ಯಾಚರಣೆಗಳ ಬಗ್ಗೆ ಸಿಬ್ಬಂದಿಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


Post a Comment

Previous Post Next Post