ಪ್ರಧಾನಿ ಮೋದಿಯವರಿಗೆ ವಿಷಸರ್ಪ ಎಂದಿದ್ದಕ್ಕೆ ವಿಷಕನ್ಯೆ ಎಂದಿದ್ದೇನೆ, ಕ್ಷಮೆ ಕೇಳಲ್ಲ: ಯತ್ನಾಳ್

 ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯವರಿಗೆ ವಿಷಕನ್ಯ ಎಂದು ಕರೆದಿರುವ ಕುರಿತು ಕ್ಷಮೆ ಕೇಳುವುದಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಸೋಮವಾರ ಹೇಳಿದ್ದಾರೆ

                                                     ಬಸನಗೌಡ ಪಾಟೀಲ್ ಯತ್ನಾಳ್.

Posted By : Rekha.M
Source : Online Desk

ಹುಬ್ಬಳ್ಳಿ: ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯವರಿಗೆ ವಿಷಕನ್ಯ ಎಂದು ಕರೆದಿರುವ ಕುರಿತು ಕ್ಷಮೆ ಕೇಳುವುದಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಸೋಮವಾರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರಿಗೆ ಕಾಂಗ್ರೆಸ್ ನಾಯಕರು ವಿಷಸರ್ಪ ಎಂದು ನಿಂದಿಸಿದ್ದರು. ಹೀಗಾಗಿಯೇ ಸೋನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿದ್ದೆ. ಇನ್ನು ದೊರೆಸ್ವಾಮಿ ನಾಯಕ ಕಂಪನಿಗೆ ಕಾಂಗ್ರೆಸ್ ಎಜೆಂಟ್ ಎಂದು ಹೇಳಿದ್ದೆ. ಈ ಹೇಳಿಕೆ ಕುರಿತು ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆಯೇ ವಿನಃ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನ ಕುರಿತು ಪ್ರತಿಕ್ರಿಯಿಸಿ ಪಕ್ಷ ಯಾರನ್ನಾದರು ಮುಖ್ಯಮಂತ್ರಿ ಮಾಡಲಿ, ಬಸವರಾಜ ಬೊಮ್ಮಾಯಿ ಅವರನ್ನಾದರೂ ಮಾಡಲಿ ಅಥವಾ ನನ್ನನ್ನಾದರೂ ಮಾಡಲಿ ಎಂದು ಹೇಳಿದರು. ಈ ಮೂಲಕ ಮುಖ್ಯಮಂತ್ರಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದರು.


Post a Comment

Previous Post Next Post