ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೋಮಾಂಸ ವ್ಯಾಪಾರಕ್ಕೆ ಪರವಾನಗಿ: ಸಿ.ಎಂ. ಇಬ್ರಾಹಿಂ

 ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

                                                 ಸಿ.ಎಂ ಇಬ್ರಾಹಿಂ

Posted By : Rekha.M
Source : Online Desk

ಹುಮನಾಬಾದ್: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಹುಮನಾಬಾದ್ ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಕಂಗಾಲಾಗಿದ್ದಾರೆ. ಹೈನುಗಾರಿಕೆ ಮಾಡುವುದಕ್ಕಾಗಿ ರೈತರು  60–70 ಸಾವಿರ ನೀಡಿ ಹಸುಗಳನ್ನು ಖರೀದಿಸಿ ತರುತ್ತಾರೆ. ಅದು ಹಾಲು ನೀಡದಿದ್ದರೆ ಮಾರಾಟ ಮಾಡಿ ಮತ್ತೊಂದು ಹಸು ತರಲು ಅನುಕೂಲ ಆಗಲಿದೆ.

ಆದರೆ, ಈ ಕಾಯ್ದೆ ಜಾರಿ ಇರುವುದರಿಂದ ರೈತರು ಯಾರಿಗೆ ಮಾರಾಟ ಮಾಡಬೇಕು? ಹಾಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲಾಗುವುದು ಎಂದರು. ಮಣಿಪುರದ ಬಿಜೆಪಿ ಸಚಿವರೊಬ್ಬರು ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಅವರಿಗೆ ಬಿಜೆಪಿಯವರು ಏನು ಮಾಡಿದ್ದೀರಿ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಇನ್ನೂ ಇಬ್ರಾಹಿಂ ಅವರ ಈ ಹೇಳಿಕೆಗೆ ಪರ - ವಿರೋಧ ಚರ್ಚೆಗಳು ಆರಂಭವಾಗಿವೆ, ಹಲವರು ಇಬ್ರಾಹಿಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


Post a Comment

Previous Post Next Post