ಕಾಂಗ್ರೆಸ್​ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್​: ಉಚಿತ ಭರವಸೆಗಳು ಜಾರಿಯಾಗುವುದೇ ..? ಆರ್ಥಿಕ ತಜ್ಞರು ಹೇಳೋದೇನು...?

 ಉಚಿತ ಭರವಸೆಗಳ ಗ್ಯಾರಂಟಿ ಕಾರ್ಡ್ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯಭೇರಿ ಭಾರಿಸಿದೆ.‌ 135 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದ ಗದ್ದುಗೆ ಹಿಡಿದಿದೆ. ಆದರೆ ಇದೀಗ ರಾಜ್ಯದ ಜನರ ಚಿತ್ತ ಕಾಂಗ್ರೆಸ್ ಘೋಷಿಸಿರುವ ಉಚಿತಗಳ ಭರವಸೆಯ ಜಾರಿ ಮೇಲೆ ನೆಟ್ಟಿದೆ. ಈ ಉಚಿತ ಭರವಸೆಗಳ ಅನುಷ್ಠಾನಕ್ಕೆ ಹಲವು ಸವಾಲುಗಳು ಹೊಸ ಸರ್ಕಾರಕ್ಕೆ ಎದುರಾಗಲಿದೆ ಎಂದು ಹೇಳಲಾ

                                                                   ಸಂಗ್ರಹ ಚಿತ್ರ

Posted By : Rekha.M
Online Desk

ಬೆಂಗಳೂರು: ಉಚಿತ ಭರವಸೆಗಳ ಗ್ಯಾರಂಟಿ ಕಾರ್ಡ್ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯಭೇರಿ ಭಾರಿಸಿದೆ.‌ 135 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದ ಗದ್ದುಗೆ ಹಿಡಿದಿದೆ. ಆದರೆ ಇದೀಗ ರಾಜ್ಯದ ಜನರ ಚಿತ್ತ ಕಾಂಗ್ರೆಸ್ ಘೋಷಿಸಿರುವ ಉಚಿತಗಳ ಭರವಸೆಯ ಜಾರಿ ಮೇಲೆ ನೆಟ್ಟಿದೆ. ಈ ಉಚಿತ ಭರವಸೆಗಳ ಅನುಷ್ಠಾನಕ್ಕೆ ಹಲವು ಸವಾಲುಗಳು ಹೊಸ ಸರ್ಕಾರಕ್ಕೆ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಹುವಾಗಿ ಕಾಂಗ್ರೆಸ್ ನ ಗೆಲುವಿನ ಪತಾಕೆ‌ ಹಾರಿಸಲು ನೆರವಾಗಿದ್ದು ಭರವಸೆಗಳ ಗ್ಯಾರಂಟಿ ಕಾರ್ಡ್. ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಕಾರ್ಡ್ ರಾಜ್ಯದ ಜನರ ಮನಮುಟ್ಟಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಮೂಡುವಂತಾಗಿದೆ.

ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ.2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ರೂ.3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಐದು ಗ್ಯಾರಂಟಿ ಕಾರ್ಡ್ ಗಳು ಕಾಂಗ್ರೆಸ್ ನ್ನು ಈ ಬಾರಿ ಅಭೂತಪೂರ್ವ ವಿಜಯದ ಗಡಿ ಮುಟ್ಟಿಸುವಂತೆ ಮಾಡಿದೆ. ಆದರೆ, ಈ ಉಚಿತ ಭರವಸೆಗಳ ಅನುಷ್ಠಾನಕ್ಕೆ ಹತ್ತಾರು ಸವಾಲುಗಳಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಜ್ಞರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಬಗ್ಗೆ ಅರ್ಥಶಾಸ್ತ್ರ ತಜ್ಞರು ಎರಡು ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಯೋಜನೆಗಳ ಸುಸ್ಥಿರತೆ ಮತ್ತು ಅವು ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತವೆ ಎಂಬುದರ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

“ಅಂತಿಮವಾಗಿ ಈ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ತೆರಿಗೆದಾರರ ಹಣವನ್ನೇ ಬಳಸಲಾಗುತ್ತದೆ. ಸ್ವಲ್ಪ ಸಮಯದ ನಂತರ ವಸ್ತುಗಳ ಮೇಲಿನ ರಾಜ್ಯದ ತೆರಿಗೆಗಳು ಹೆಚ್ಚಾದರೆ ಮತ್ತು ಬಜೆಟ್ನಲ್ಲಿನ ಕೊರತೆಯು ಹೆಚ್ಚಾದರೆ ಆಶ್ಚರ್ಯವೇನಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಮಹಿಳೆಯರಿಗೂ ರೂ.2000 ಮತ್ತು 200 ಯುನಿಟ್ ಉಚಿತ ವಿದ್ಯುತ್ ನೀಡುವ ಅಗತ್ಯವಿಲ್ಲ. ಸಾಕಷ್ಟು ಜನರಿಗೆ ಇದರ ಅಗತ್ಯವೂ ಇಲ್ಲ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಪ್ರಯಾಣದಲ್ಲಿ ಮತ್ತು ಯುವಕರಿಗೆ ಸಹಾಯ ಮಾಡುವ ಅಗತ್ಯವಿದ್ದರೂ, ಉದ್ಯೋಗ ದೊರಕಿಸಿಕೊಡಲು ಮತ್ತು ದೀನದಲಿತರನ್ನು ಸಬಲೀಕರಣಗೊಳಿಸಲು ಸರ್ಕಾರವು ಸಮಾನಾಂತರವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಹೇಳಿದ್ದಾರೆ.


Post a Comment

Previous Post Next Post