'ಪಕ್ಷಕ್ಕಾಗಿ ನಾವು ತ್ಯಾಗ ಮಾಡಬೇಕಾಯಿತು': ಸಿಎಂ ಗಾದಿ ಕುರಿತು ಜಿ ಪರಮೇಶ್ವರ್ ಬೇಸರದ ಮಾತು

 ಉಪಮುಖ್ಯಮಂತ್ರಿ ಸ್ಥಾನ ನಿರಾಕರಣೆ ಕುರಿತು ಅಸಮಾಧಾನಗೊಂಡಿರುವ ಕರ್ನಾಟಕದ ಕಾಂಗ್ರೆಸ್ ಹಿರಿಯ ಶಾಸಕ ಜಿ ಪರಮೇಶ್ವರ ಅವರು ಶುಕ್ರವಾರ ‘ಒಂದು ಹಂತದಲ್ಲಿ ತ್ಯಾಗ’ ಮಾಡಲೇಬೇಕು ಎಂದು ಹೇಳಿದ್ದಾರೆ.

                                                                  ಪರಮೇಶ್ವರ್

Posted By : Rekha.M
Online Desk

ಬೆಂಗಳೂರು: ಉಪಮುಖ್ಯಮಂತ್ರಿ ಸ್ಥಾನ ನಿರಾಕರಣೆ ಕುರಿತು ಅಸಮಾಧಾನಗೊಂಡಿರುವ ಕರ್ನಾಟಕದ ಕಾಂಗ್ರೆಸ್ ಹಿರಿಯ ಶಾಸಕ ಜಿ ಪರಮೇಶ್ವರ ಅವರು ಶುಕ್ರವಾರ ‘ಒಂದು ಹಂತದಲ್ಲಿ ತ್ಯಾಗ’ ಮಾಡಲೇಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಸಿಎಂ ಮತ್ತು ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪರಮೇಶ್ವರ್ ಅವರು, ಇದೀಗ ಸಿಎಂ ಸ್ಥಾನ ಕೈತಪ್ಪಿದ ಕುರಿತು ಮಾತನಾಡಿದ್ದು, ‘ಪಕ್ಷಕ್ಕಾಗಿ ಒಂದು ಹಂತದಲ್ಲಿ ತ್ಯಾಗ ಮಾಡಲೇಬೇಕು.. ಅದು ಪರವಾಗಿಲ್ಲ. ನಾವೆಲ್ಲರೂ ಒಂದು ಸಮಯದಲ್ಲಿ ತ್ಯಾಗ ಮಾಡಬೇಕಾಗುತ್ತದೆ.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದು, ಒಳ್ಳೆಯದಾಗುತ್ತಿದೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ. 

ಕಾಂಗ್ರೆಸ್ ಗುರುವಾರ ಅಧಿಕೃತವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಹೆಸರನ್ನು ಘೋಷಿಸಿತು, ಹೀಗಾಗಿ ಸತತ 5 ದಿನಗಳ ಸಸ್ಪೆನ್ಸ್ ಕೊನೆಗೊಂಡಿದ್ದು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಉಭಯ ನಾಯಕರು ಇಂದು ರಾಷ್ಟ್ರ ರಾಜಧಾನಿಗೆ ಭೇಟಿ ತೆರಳಿದ್ದು, ಸರ್ಕಾರಕ್ಕೆ ಸೇರ್ಪಡೆಗೊಳ್ಳಲಿರುವ ಶಾಸಕರ ಹೆಸರುಗಳನ್ನು ಚರ್ಚಿಸಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಮತ್ತು ರಾಜ್ಯಪಾಲರ ಮುಂದೆ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಅವರು ನಿನ್ನೆ ಬೆಂಗಳೂರಿಗೆ ಮರಳಿದ್ದರು. ಮೇ 20ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.


Post a Comment

Previous Post Next Post