ಪ್ರಾಮಾಣಿಕ ನಾಯಕರಿಗೆ ಬಿಜೆಪಿಯಲ್ಲಿ ಗೌರವ ಇಲ್ಲ: ಜಗದೀಶ್ ಶೆಟ್ಟರ್

 30 ವರ್ಷಗಳ ಕಾಲ ಬಿಜೆಪಿಗಾಗಿಸೇವೆ ಸಲ್ಲಿಸಿದೆ. ಆದರೆ ಏಳನೇ ಅವಧಿಗೆ ಸ್ಪರ್ಧಿಸಲು ನಿರ್ಧರಿಸಿದಾಗ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಯಿ. ಪ್ರಾಮಾಣಿಕ ನಾಯಕರಿಗೆ ಬಿಜೆಪಿಯಲ್ಲಿ ಗೌರವವಿಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಹೇಳಿದ್ದಾರೆ.

                                                             ಜಗದೀಶ್ ಶೆಟ್ಟರ್

Posted By :Rekha.M
Online Desk

ಬೆಳಗಾವಿ: 30 ವರ್ಷಗಳ ಕಾಲ ಬಿಜೆಪಿಗಾಗಿಸೇವೆ ಸಲ್ಲಿಸಿದೆ. ಆದರೆ ಏಳನೇ ಅವಧಿಗೆ ಸ್ಪರ್ಧಿಸಲು ನಿರ್ಧರಿಸಿದಾಗ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಯಿ. ಪ್ರಾಮಾಣಿಕ ನಾಯಕರಿಗೆ ಬಿಜೆಪಿಯಲ್ಲಿ ಗೌರವವಿಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ನಾಯಕರು ನಾನು ಹಿರಿಯ ನಾಯಕನಾಗಬಹುದು ಮತ್ತು ಉನ್ನತ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ಹೆದರಿದ್ದರು. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದರು. ಪಕ್ಷದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ಅವರನ್ನೂ ಕಡೆಗಣಿಸಲಾಗಿದೆ, ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಕೆಲವು ಬಿಜೆಪಿ ನಾಯಕರ ಯೋಜನೆ ವಿಫಲವಾಗಿದೆ ಎಂದು ಹೇಳಿದರು.

ನಾನು ಹತ್ತು ವರ್ಷದಲ್ಲಿ ಮಾಡಿದ ಕೆಲಸ ಅವರು ನೆನಪು ಮಾಡಿಕೊಳ್ಳಲಿಲ್ಲ. ಬೊಮ್ಮಾಯಿ ಸಿಎಂ ಆಗುವಾಗ ನಾನು ಲಾಬಿ ಮಾಡಿದ್ದರೆ ಮಂತ್ರಿ ಆಗುತ್ತಿದ್ದೆ. ಏನೇ ಮಾಡಿದರೂ ನಾನು ಸುಮ್ಮನೆ ಇರುತ್ತೇನೆ ಎಂದುಕೊಂಡಿದ್ದರು. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದರು. ಕೆಲವೇ ಕೆಲವು ವ್ಯಕ್ತಿಗಳ ಮೂಲಕ ಜಗದೀಶ್ ಶೆಟ್ಟರ್ ಮುಗಿಸುವ ಕೆಲಸ ಆಯಿತು. ನಾನು ಸೀನಿಯರ್ ಅನ್ನೋ ಕಾರಣಕ್ಕೆ ಮುಂದೆ ಅಡ್ಡಿ ಆಗಬಹುದು ಎಂದು ಹೀಗೆ ಮಾಡಿದರು. ನನಗೆ ಚೂರಿ ಹಾಕಿ ಮುಗಿಸಿಬಿಡೋ ಕೆಲಸವಾಯಿತು. 6 ಜನರ ಸಿಡಿ ಇದ್ದಾವೆ, ಇಷ್ಟೊತ್ತಿಗೆಲ್ಲ ಟಿವಿಯಲ್ಲಿ ಬಂದು ಅವರ ಮಾನ ಮರ್ಯಾದೆ ಹೋಗುತ್ತಿತ್ತು.

ವರಿಷ್ಠರ ಮಾತಿಗೆ ನಾನು ಒಪ್ಪದೇ ಚಾಲೆಂಜ್ ಮಾಡುವೆ. ಬಿಜೆಪಿಯಲ್ಲಿ ಸಿದ್ಧಾಂತ ಉಳಿದಿಲ್ಲ, ಕ್ರಿಮಿನಲ್ ಗಳಿಗೆ ವಯಸ್ಸಾದವರಿಗೆ ಟಿಕೆಟ್ ಕೊಡಲಾಗಿದೆ. ಗುಲಾಮಗಿರಿ, ಜೀ ಹುಜುರ್ ವ್ಯವಸ್ಥೆಗೆ ಬಗ್ಗದೇ ಸ್ಪರ್ಧೆ ಮಾಡಿರುವೆ. ಮಹಾನಗರ ಸುಂದರ ನಗರ ಮಾಡಬೇಕು ಎಂಬ ಕನಸು ಇದೆ. ಅದನ್ನ ಮಾಡಿ ತೋರಿಸಲು ಇನ್ನೂ ಒಂದು ಅವಧಿಗೆ ಶಾಸಕನಾಗಬೇಕೆಂದಿದ್ದೇನೆ ಎಂದು ತಿಳಿಸಿದರು.

ಬಿ.ಎಲ್ ಸಂತೋಷ್ ಎಂಬ ವ್ಯಕ್ತಿಯಿಂದ ಪಾರ್ಟಿ ಹಾಳಾಗುತ್ತಿದೆ. ಬಿ.ಎಲ್.ಸಂತೋಷನಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ. ಬಿಜೆಪಿ ಸೌಧವೇ ಕುಸಿಯುವಂತಾಗಿದೆ. ಅವನಿಗೆ ಮಣೆ ಹಾಕುತ್ತಿರುವುದು ನನಗೆ ಆಶ್ಚರ್ಯ ಆಗುತ್ತಿದೆ. ಎಲ್ಲಾ ಕಡೆ ಫೇಲ್ ಆಗಿರೋ ವ್ಯಕ್ತಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ ಸೋಲಿಸಿ ಎಂದು ಹೇಳುತ್ತಾರೆ. ಇದು ನನಗಷ್ಟೇ ಅಲ್ಲಾ ನಮ್ಮ ಸಮಾಜಕ್ಕೆ ಚಾಲೆಂಜ್ ಆಗಿದೆ. ಬಿಜೆಪಿಯವರು 67 ವರ್ಷದ ನನಗೆ ಟಿಕೆಟ್ ಕೊಡಲಿಲ್ಲ. ಆದರೆ, ಕಾಂಗ್ರೆಸ್ 93 ವರ್ಷದ ಶಾಮನೂರು ಶಿವಶಂಕರಪ್ಪ ಟಿಕೆಟ್ ಕೊಟ್ಟಿದ್ದಾರೆ. ಸ್ವಾಭಿಮಾನ ಸಲುವಾಗಿ ದೃಢವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ದುರಂಹಕಾರದ ಬಿಜೆಪಿಗೆ ನೀವೆಲ್ಲರೂ ಪಾಠ ಕಲಿಸಬೇಕು ಎಂದು ಗುಡುಗಿದರು.

ಜಗದೀಶ್ ಶೆಟ್ಟರ್ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಇದು ವೀರಶೈವ ಲಿಂಗಾಯತ ಸಮಾಜಕ್ಕೆ ಧಕ್ಕೆ ಆದ ಹಾಗೆ. ಪಕ್ಷಕ್ಕಾಗಿ ಕೂಲಿ ಕೆಲಸ ಮಾಡಿದ್ದೇನೆ. ಸ್ಥಾನಮಾನ ಸಿಕ್ಕಿದೆ ಅಂತಾರೆ. ಎಷ್ಟು ಅವಧಿ ಸ್ಥಾನಮಾನ ಸಿಕ್ಕಿದೆ. ನನ್ನ ರಾಜಕೀಯ ಜೀವನದಲ್ಲಿ ಎರಡೂ ವರ್ಷದಿಂದ ಕೆಟ್ಟ ದಿನಗಳನ್ನ ಎದುರಿಸಿದ್ದೇನೆ. ಜಗದೀಶ್ ಶೆಟ್ಟರ್ ವಿರುದ್ಧ ಷಡ್ಯಂತ್ರ ಮಾಡಲಾಯಿತು. ಸಿಎಂ ಹುದ್ದೆಗೆ ನಾನೂ ಅಡ್ಡಲಾಗುತ್ತೇನೆಂದು ನನ್ನನ್ನ ಇಲ್ಲಿಯೇ ಚಿವುಟಿ ಹಾಕಿದರು. ಕುಟುಂಬ ರಾಜಕಾರಣ ಎಲ್ಲಿ ಹೋಯಿತು ನಿಮ್ಮದು. ನನಗೂ ಒಂದು ವ್ಯಕ್ತಿತ್ವ ಇದೆ, ನನಗೂ ಸ್ವಾಭಿಮಾನ ಇದೆ. ಅದಕ್ಕಾಗಿ ನಾನೂ ಚಾಲೆಂಜ್ ಆಗಿ ಸ್ವೀಕಾರ ಮಾಡಿ ಸ್ಪರ್ಧೆ ಮಾಬೇಕಾಯಿತು ಎಂದರು.Post a Comment

Previous Post Next Post