8 ವರ್ಷದ ಬಾಲಕಿಯಿಂದ ಸುಳ್ಳು ಆರೋಪ: ಆಹಾರ ಡೆಲಿವರಿ ಏಜೆಂಟ್ ಗೆ ಥಳಿತ

 8 ವರ್ಷದ ಬಾಲಕಿಯೊಬ್ಬಳ ಆರೋಪದ ಪರಿಣಾಮ ಆಹಾರ ಡೆಲಿವರಿ ಏಜೆಂಟ್ ನ್ನು ಹೌಸಿಂಗ್ ಸೊಸೈಟಿಯ ಮಂದಿ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

                                                          ಆಹಾರ ಡೆಲಿವರಿ ಏಜೆಂಟ್

Posted By : Rekha.M
Online Desk

ಬೆಂಗಳೂರು: 8 ವರ್ಷದ ಬಾಲಕಿಯೊಬ್ಬಳ ಆರೋಪದ ಪರಿಣಾಮ ಆಹಾರ ಡೆಲಿವರಿ ಏಜೆಂಟ್ ನ್ನು ಹೌಸಿಂಗ್ ಸೊಸೈಟಿಯ ಮಂದಿ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಇಂಡಿಯಾ ಟುಡೆ ವರದಿಯ ಪ್ರಕಾರ ಫುಡ್ ಡೆಲಿವರಿ ಏಜೆಂಟ್ ತನ್ನನ್ನು ಒತ್ತಾಯಪೂರ್ವಕವಾಗಿ ಮಹಡಿಗೆ ಕರೆದೊಯ್ದಿದ್ದ ಎಂದು ಬಾಲಕಿ ಆರೋಪಿಸಿದ್ದಳು 

ಬಾಲಕಿಯ ಆರೋಪವನ್ನು ಕೇಳಿದ ಸ್ಥಳೀಯರು ಹಾಗೂ ಸೆಕ್ಯುರಿಟಿ ಗಾರ್ಡ್ ಗಳು ಏಜೆಂಟ್ ನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ ಕೊನೆಗೆ ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿದ ಬಳಿಕ ಆಕೆ ತಾನೊಬ್ಬಳೇ ಮಹಡಿಗೆ ತೆರಳಿ ಆಟವಾಡಿಕೊಂಡಿದ್ದದ್ದು ಬೆಳಕಿಗೆ ಬಂದಿದೆ.
 
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಆಕೆಗಾಗಿ ಹುಡುಕುತ್ತಾ ಪೋಷಕರು ಟೆರೇಸ್ ಗೆ ಬಂದಾಗ ಈ ಬಾಲಕಿ ಡೆಲಿವರಿ ಏಜೆಂಟ್ ವಿರುದ್ಧ ಆರೋಪ ಮಾಡಿದ್ದಾಳೆ. ಫುಡ್ ಡೆಲಿವರಿ ಏಜೆಂಟ್ ತನ್ನನ್ನು ಅಲ್ಲಿಗೆ ಕರೆದೊಯ್ದಿದ್ದಾನೆ ಮತ್ತು ತಪ್ಪಿಸಿಕೊಳ್ಳಲು ಕೈಯನ್ನು ಕಚ್ಚಿದೆ ಎಂದು ಹುಡುಗಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ.

ಇದರಿಂದ ಕುಪಿತಗೊಂಡ ಬಾಲಕಿಯ ಪೋಷಕರು ಕೂಡಲೇ ಭದ್ರತಾ ಸಿಬ್ಬಂದಿಗೆ ಕರೆ ಮಾಡಿ ಅಪಾರ್ಟ್‌ಮೆಂಟ್‌ನ ಗೇಟ್‌ಗಳನ್ನು ಮುಚ್ಚಿದ್ದಾರೆ. ನಂತರ ಹುಡುಗಿ ಕ್ಯಾಂಪಸ್‌ನಲ್ಲಿದ್ದ ಡೆಲಿವರಿ ಏಜೆಂಟ್ ಕಡೆಗೆ ತೋರಿಸಿದ್ದಾಳೆ. ಈ ಬಳಿಕ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು, ಆದರೆ ಪೊಲೀಸರು ಬರುವ ಮೊದಲು ಸ್ಥಳೀಯರು ವ್ಯಕ್ತಿಯನ್ನು ಥಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಟೆರೇಸ್‌ ಗೆ ತೆರಳಿದ್ದ ಹುಡುಗಿ ತನ್ನ ಪೋಷಕರಿಗೆ ಸುಳ್ಳು ಹೇಳಿದ್ದಾಳೆ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಡೆಲಿವರಿ ಏಜೆಂಟ್,  ಆ ಬಾಲಕಿಯ ಪೋಷಕರು, ಸೆಕ್ಯುರಿಟಿ ಗಾರ್ಡ್ ಸೇರಿ ಎಲ್ಲರೂ ತಮ್ಮನ್ನು ಥಳಿಸಿದ್ದಾರೆ. ಆದರೆ ಆಕೆ ಏಕಾಗಿ ಸುಳ್ಳು ಹೇಳಿದಳು ಎಂಬುದು ತಿಳಿದಿಲ್ಲ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ, ಒಂದು ವೇಳೆ ಸಿಸಿಟಿವಿ ಇಲ್ಲದೇ ಇದ್ದಲ್ಲಿ ನನ್ನ ಪರಿಸ್ಥಿತಿಯನ್ನು ಊಹಿಸಿಕೊಂಡು ಭಯವಾಗುತ್ತಿದೆ ಎಂದು ಹೇಳಿದ್ದಾರೆ. ತರಗತಿಯ ಅವಧಿಯಲ್ಲಿ ಆಟವಾಡುತ್ತಿದ್ದಕ್ಕಾಗಿ ಪೋಷಕರು ಥಳಿಸುತ್ತಾರೆ ಎಂಬ ಭಯದಿಂದ ಸುಳ್ಳು ಹೇಳಿದ್ದಾಗಿ ಬಾಲಕಿ ಪೊಲೀಸರಿಗೆ ಹೇಳಿದ್ದಾಳೆ.


Post a Comment

Previous Post Next Post