ಗ್ಯಾರಂಟಿ ಯೋಜನೆಯಿಂದ ಶುರುವಾಯ್ತು ಸಂಕಷ್ಟ: ಪರಿಶೀಲನೆ ವೇಳೆ ಸಿಕ್ಕಿಬೀಳುವ ಆತಂಕ, ಬಿಪಿಎಲ್ ಕಾರ್ಡ್ ಮರಳಿಸುತ್ತಿರುವ ಸರ್ಕಾರಿ ಸಿಬ್ಬಂದಿಗಳು!

 ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಧಿಕಾರಿಗಳು ಕೈಗೊಳ್ಳುವ ಕಠಿಣ ಕ್ರಮಕ್ಕೆ ಹೆದರಿರುವ ಸರ್ಕಾರಿ ಸಿಬ್ಬಂದಿಗಳು ತಮ್ಮ ತಮ್ಮ ಬಿಪಿಎಲ್ ಕಾರ್ಡ್ ಗಳನ್ನು ಮರಳಿಸುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.

                                                                  ಸಂಗ್ರಹ ಚಿತ್ರ

Posted By : Rekha.M
Online Desk

ಕೊಪ್ಪಳ: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಧಿಕಾರಿಗಳು ಕೈಗೊಳ್ಳುವ ಕಠಿಣ ಕ್ರಮಕ್ಕೆ ಹೆದರಿರುವ ಸರ್ಕಾರಿ ಸಿಬ್ಬಂದಿಗಳು ತಮ್ಮ ತಮ್ಮ ಬಿಪಿಎಲ್ ಕಾರ್ಡ್ ಗಳನ್ನು ಮರಳಿಸುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.

ಕಳೆದ ಕೆಲವು ವಾರಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಹಲವು ಸರ್ಕಾರಿ ಸಿಬ್ಬಂದಿಗಳು ತಮ್ಮ ತಮ್ಮ ಬಿಪಿಎಲ್ ಕಾರ್ಡ್ ಗಳನ್ನು ಹಿಂತಿರುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.

ರಾಜ್ಯದಾದ್ಯಂತ ಹಲವು ಸರ್ಕಾರಿ ಸಿಬ್ಬಂದಿಗಳು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆಂಬ ಆರೋಪಗಳು ಈ ಹಿಂದೆ ಕೇಳಿ ಬಂದಿತ್ತು. ಇದೀಗ ಹೊಸ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಸಂದರ್ಭದಲ್ಲಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿದೆ. ಈ ವೇಳೆ ಸಿಕ್ಕಿ ಬೀಳುವ ಆತಂಕದಿಂದ ಸರ್ಕಾರಿ ಸಿಬ್ಬಂದಿಗಳು ಬಿಪಿಎಲ್ ಕಾರ್ಡ್ ಗಳನ್ನು ಮರಳಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಗುರುತಿನ ಚೀಟಿಯನ್ನು ಪರಿಶೀಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮುಂದಾಗಲಿದ್ದು, ಈ ಸಂದರ್ಭದಲ್ಲಿ ನಕಲಿ ಐಡಿಗಳನ್ನು ಗುರುತಿಸುವ ಸಾಧ್ಯತೆಯಿದೆ. ಈ ಪರಿಶೀಲನೆ ವೇಳೆ ಸಿಕ್ಕಿಬೀಳುವ ಆತಂಕ ಸರ್ಕಾರಿ ಸಿಬ್ಬಂದಿಗಳಿಗೆ ಎದುರಾಗಿದೆ. ಒಂದು ವೇಳೆ ಸಿಕ್ಕಿಬಿದ್ದಿದ್ದೇ ಆದರೆ, ಕಾರ್ಡ್ ಹೊಂದಿರುವ ಸಮಯವನ್ನು ಅವಲಂಬಿಸಿ, ದಂಡ ಹಾಗೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಡ್ ಗಳನ್ನು ಮರಳಿಸುತ್ತಿದ್ದಾರೆಂದು ತಿಳಿದುಬಂದಿದೆ.

ಕೊಪ್ಪಳ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕಳೆದ ಒಂದು ತಿಂಗಳಲ್ಲಿ 22 ಸರ್ಕಾರಿ ನೌಕರರು, ನಾಲ್ವರು ಪೊಲೀಸ್ ಇಲಾಖೆಯವರು ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಹಿಂದಿರುಗಿಸಿದ್ದಾರೆ. “ಸಮಯವನ್ನು ಅವಲಂಬಿಸಿ, ನಾವು ಅವರಿಗೆ 1,000 ಮತ್ತು 10,000 ರೂಗಳವರೆಗೆ ದಂಡ ವಿಧಿಸಿದ್ದೇವೆ. ಕಳೆದ ಆರು ತಿಂಗಳಲ್ಲಿ, ವಿವಿಧ ಸರ್ಕಾರಿ ನೌಕರರು ಮತ್ತು ವ್ಯಕ್ತಿಗಳಿಂದ 234 ಕಾರ್ಡ್‌ಗಳನ್ನು ಸ್ವೀಕರಿಸಲಾಗಿದೆ. ಇಲ್ಲಿಯವರೆಗೆ ರೂ. 7 ಲಕ್ಷದವರೆಗೆ ದಂಡ ವಸೂಲಿ ಮಡಾಲಾಗಿದೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಘೋಷಣೆ ಬಳಿಕ ದಾಖಲೆಗಳನ್ನು ಒದಗಿಸುವುದು ಮುಖ್ಯವಾಗಿದೆ. ಉದಾಹರಣೆಗೆ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡುವುದು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತಷ್ಟು ಅನುಕೂಲವನ್ನು ಒದಗಿಸಲಿದೆ. ಯೋಜನೆ ಅಡಿಯಲ್ಲಿ ಕುಟುಂಬದ ಓರ್ವ ಮಹಿಳೆಗೆ ರೂ.2,000 ನೀಡಲಾಗುತ್ತದೆ.

ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಸರ್ಕಾರ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸುತ್ತಿದೆ. ಆದರೆ, ಸರ್ಕಾರಿ ನೌಕರಿ ಪಡೆದು, ಸರ್ಕಾರದಿಂದ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುವ ಸರ್ಕಾರಿ ನೌಕರರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದು ವಿರೋಧಕ್ಕೆ ಕಾರಣವಾಗಿದೆ. ಈ ನಡುವೆ ಹಲವಾರು ಕಾರ್ಯಕರ್ತರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಗುರ್ತಿಸಿ ಶಿಕ್ಷಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಸರ್ಕಾರದ ಯೋಜನೆಗಳು ಸರಿಯಾದ ಫಲಾನುಭವಿಗಳಿಗೆ ತಲುಪಬೇಕು ಕಾರ್ಯಕರ್ತರೊಬ್ಬರು ಸಲಹೆ ನೀಡಿದರು.


Post a Comment

Previous Post Next Post