ತೀರ್ಥಹಳಿ: ಮುಖ್ಯ ಬಸ್ಸು ನಿಲ್ದಾಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದ ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆ.

 ನಿನ್ನೆ ದಿನ . ತೀರ್ಥಹಳಿ ಮುಖ್ಯ ಬಸ್ಸು ನಿಲ್ದಾಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದ ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆ. ಇದರಲ್ಲಿ ವಿಶೇಷ ಸನ್ನಿವೇಶ ಒಂದು ನಡೆಯಿತು ಕಾರ್ಯಕ್ರಮದ ಅದ್ಯಕ್ಷತೆ ಮಾನ್ಯ ಶಾಸಕರು ಆರಗ ಜ್ಞಾನೇಂದ್ರ ಅವರದ್ದು.


ತಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯ ಮೊದಲನೆಯ ಕಾರ್ಯಕ್ರಮ ಎಂದು ನಾಯಕರಾದ  ಡಾ ಆರ್ ಎಂ ಮಂಜುನಾಥ್ ಗೌಡ ಅವರು ತೀರ್ಥಹಳಿ ಬಸ್ಸು ಸ್ಟ್ಯಾಂಡ್ ಗೆ ಆಗಮಿಸುತ್ತಾರೆ ಮುಖಂಡರುಗಳ ಜೊತೆಗೆ. ತಕ್ಷಣ  ಮಾನ್ಯ ಷಾಸಕರು ವೇದಿಕೆ ಬನ್ನಿ ಎಂದು ಕೈ ಸನ್ನೆ ಮಾಡಿ ಕರೆಸಿಕೊಂಡು ದ್ವೀಪವನ್ನು ಬೆಳಗಿಸಿ ಎಂದು ಕೂರಿಸುತ್ತಾರೆ ಅದು ಶಾಸಕರ ದೊಡ್ಡ ಗುಣ.

ಬೇರೆ ಯಾರಾದರೂ ತಮ್ಮ ಪಕ್ಷ ನಾನು ಆ ಪಕ್ಷದ ನಾಯಕ ಅಂತ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿ ತಮ್ಮ ನಾಉಅಕರುಗಳನ್ನು ಮಾತಾನಾಡುತ್ತಿದ್ದರೆನೋ. ಆದರೆ ನಮ್ಮ ನಾಯಕರು ಡಾ ಆರ್ ಎಂ ಮಂಜುನಾಥ್ ಗೌದ  ಅವರು ಮಾತಾನಾಡುವ ಮೊದಲು ನಾನು ಈಕಾರ್ಯಕ್ರಮದ ಅತಿಥಿ ಅಲ್ಲ ಮಾನ್ಯ ಶಾಸಕರು ನನ್ನನ್ನು ವೇದಿಕೆ ಆಹ್ವಾನಿಸಿ ಅವರ ಹಿರಿತನವನ್ನು ತೊರಿಸಿದ್ದಾರೆ ಜೊತೆಗೆ ಅವರನ್ನು ತೀರ್ಥಹಳಿಯ ಮತದಾರರು ಗೆಲ್ಲಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.

ಇದು ನಮ್ಮ ಸಮಾಜವಾದಿ ನೆಲ ಇದು ನಮ್ಮ ತೀರ್ಥಹಳಿ ರಾಜಕಾರಣ ಮತ್ತು ಮಾದರಿ ಹಿರಿಯ ರಾಜಕಾರಣಿಗಳು. ಶಾಸಕರಿ ಆರ್ ಎಂ ಅವರಿಗೆ ಕೊಟ್ಟ ಗೌರವ ಮೆಚ್ಚುಗೆ ಆಯಿತು ನೆರೆದಿದ್ದ ಸಾರ್ವಜನಿಕರಿಗೆ ಆರ್ ಎಂ ಅವರು ತನ್ನ ಪಕ್ಷದ ಪ್ರಭಾವಿ ನಾಯಕ ಅನ್ನುವುದು ಬದಿಯಲ್ಲಿ ಇಟ್ಟು ಶಾಸಕರು ಆರಗ ಅವರನ್ನು ಅಭಿನಂದನೆಗಳು ಸಲ್ಲಿಸಿ ವೇದಿಕೆಯಲ್ಲಿ ಮಾತಾನಾಡಿದ್ದು ಅವರು ಅವರ ಅಭಿಮಾನಿಗಳಿಗೂ ತುಂಬಾ ಸಂತೋಷವಾಯಿತು.

Post a Comment

Previous Post Next Post