ಶಿವಮೊಗ್ಗ: ಸಿಂಗ್ ಪತ್ರಿಕೆಯ ಸುದ್ದಿಯನ್ನು ನೋಡಿ ಎಚ್ಚೆತ್ತುಕೊಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು: ಮಂಡಗದ್ದೆಯ ಅಕ್ರಮ ಮರಳು ಗಣಿಗಾರಿಕೆ ವಿರುದ್ದ ಕ್ರಮ.

 ಮಂಡಗದ್ದೆಯ ಫಾರೆಸ್ಟ್ ರೇಂಜರ್ ಆಫೀಸ್ ಮಂದೆಯೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಅದನ್ನು ತಡೆಗಟ್ಟುವ ಉದ್ದೇಶದಿಂದ ನಮ್ಮ ಪತ್ರಿಕೆಯಿಂದ ಸುದ್ದಿಮಾಡಲಾಗಿತ್ತು ಅದನ್ನು ನೋಡಿದ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅವರ ವಿರುದ್ದ ಕ್ರಮ ಕೈಗೊಂಡಿದ್ದಾರೆ.

ಅನೇಕ ದಿನಗಳಿಂದಲೂ ಅಲ್ಲಿ ಈ ಅಕ್ರಮ ನದೆಯುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಆದರೆ ಈ ವಿಷಯ ತಿಳಿದ ಕೂಡಲೇ ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವರನ್ನು ವಶಕ್ಕೆ ಪಡೆದಿರುವುದು ನಿಜಕ್ಕೂ ಪ್ರಶಂಸಿಸುವ ವಿಷಯವಾಗಿದೆ. ನಮ್ಮ ಪತ್ರಿಕೆಯ ಸುದ್ದಿಯನ್ನು ನೋಡಿ ಕ್ರಮ ಕೈಗೊಂಡಿರುವುದು ಅವರ ಕಾರ್ಯವೈಖರಿಯನ್ನು ತೋರಿಸುತ್ತದೆ.

ಇದೇ ರೀತಿ ಅಲ್ಲಿ ಇನ್ನೂ ಎರೆಡು ಸ್ಥಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಅದರ ವಿರುದ್ದವೂ ಸಹ ಅಧಿಕಾರಿಗಳು ತನಿಖೆ ನಡೆಸಬೇಕು. ಈ ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಬೇಕು. ಇಲ್ಲದಿದ್ದರೆ ಇದು ಈಗೆ ಮುಂದುವರೆಯುವ ಸಾಧ್ಯತೆಯೇ ಹೆಚ್ಚಿದೆ. ಈ ವಿಷಯದ ಬಗ್ಗೆ ಸುದ್ದಿ ನೋಡಿದ ಮೇಲೆ ಕಾನೂನಿನ ನಿಯಮದ ಪ್ರಕಾರ ಕ್ರಮಕೈಗೊಂಡಿರುವುದು ಅವರ ಸಮಯ ಪ್ರಜ್ಞೆಯನ್ನು ತೋರಿಸುತ್ತದೆ. ಇದೇ ರೀತಿ ಅಧಿಕಾರಿಗಳು ಕ್ರಮ ಕೈಗೊಂಡರೆ ಇನ್ನು ಮುಂದೆ ಅಕ್ರಮ ಮರಳು ಗಣಿಗಾರಿಕೆ ಕೃತ್ಯಕ್ಕೆ ಮುಂದೆಬರಲು ಯಾರೂ ಸಹ ಯೋಚಿಸುವುದಿಲ್ಲ.

Post a Comment

Previous Post Next Post